Categories: N.R pura

ಸಂಪತ್ತಿನಿಂದ ಸತ್ಯ ಸಂಸ್ಕೃತಿ ಕೊಳ್ಳಲಾಗದು ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್.ಪುರ: ಜೀವನದಲ್ಲಿ ಬಹಳಷ್ಟು ಜನ ಹಣವೇ ಮುಖ್ಯವೆಂದು ತಿಳಿದವರುಂಟು. ಹಣದೊಂದಿಗೆ ಗುಣವು ಮುಖ್ಯವೆಂಬುದನ್ನು ಮರೆಯಬಾರದು. ಸಂಪತ್ತಿನಿಂದ ಸೌಲಭ್ಯ ಪಡೆಯಬಹುಯದೇ ವಿನಾ ಸತ್ಯ ಸಂಸ್ಕೃತಿ ಕೊಳ್ಳಲಾಗದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರಾವಣ ಪುರಾಣ ಪ್ರವಚನ ಹಾಗೂ ಎಡೆಯೂರು ರೇಣುಕ ಶ್ರೀಗಳವರ 76ನೇ ಜನ್ಮ ವರ್ಧಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ಹಣವಿಲ್ಲದಲೇ ದೈನಂದಿನ ಜೀವನ ನಡೆಯದು. ಆದರೂ ಜೀವನ ನಿರ್ವಹಣೆಗೆ ಹಣ ಬೇಕು. ಹಣದಿಂದ ಔಷಧಿ ಕೊಳ್ಳಬಹುದು. ಆದರೆ ಆರೋಗ್ಯ ಭಾಗ್ಯ ಕೊಳ್ಳಲಾಗದು. ಹಣದಿಂದ ಆಹಾರ ಪದಾರ್ಥ ಕೊಳ್ಳಬಹುದು. ಆದರೆ ಪಚನ ಶಕ್ತಿ ಕೊಳ್ಳಲಾಗದು. ಹಣದಿಂದ ಹಾಸಿಗೆ ಕೊಂಡರೂ ನಿದ್ದೆ ಕೊಳ್ಳಲಾಗದು. ಹಣದಿಂದ ಪುಸ್ತಕ ಪತ್ರಿಕೆೆ ಕೊಳ್ಳಬಹುದು. ಆದರೆ ಅವುಗಳನ್ನು ಓದದೇ ಜ್ಞಾನ ಪಡೆಯಲಾಗದು. ಹಣದಿಂದ ಮನೆ ವಾಹನ ಕೊಳ್ಳಬಹುದು. ಆದರೆ ಮನದ ಶಾಂತಿ ನೆಮ್ಮದಿ ಕೊಳ್ಳಲಾಗದು. ಸಂಪತ್ತಿನಿಂದ ಮನುಷ್ಯ ವಸ್ತು ಕೊಳ್ಳಬಹುದು. ಆದರೆ ಸತ್ಯ ಸಂಸ್ಕೃತಿ ಕೊಳ್ಳಲಾಗದು. ಕಸ್ತೂರಿ ಮೃಗದ ನಾಭಿಯಿಂದ ಸುಗಂಧ ಸೂಸುತ್ತಿದ್ದರೂ ಅರಿಯದೇ ವನವೆಲ್ಲ ಸುತ್ತಿ ಬಳಲಿದಂತೆ ಮನುಷ್ಯ ತನ್ನಂತರಂಗದಲ್ಲಿರುವ ದೇವರನ್ನು ಕಾಣದೇ ಪರಿತಪಿಸುತ್ತಿದ್ದಾನೆ. ಪರಮ ಗುರುವಿನ ಅನುಗ್ರಹ ಸಂಸ್ಕಾರ ಇಲ್ಲದಿದ್ದರೆ ಜೀವನ ಉಜ್ವಲಗೊಳ್ಳದು. ವೀರಶೈವ ಧರ್ಮದಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ಜೀವನ ವಿಕಾಸಕ್ಕೆ ಗುರುವೇ ಮೂಲ. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳವರ 76ನೇ ವರ್ಷದ ಜನ್ಮ ದಿನೋತ್ಸವ ಇಂದೇ ಬಂದಿರುವುದು ಯೋಗಾಯೋಗ. ಶ್ರೀ ರಂಭಾಪುರಿ ಪೀಠದ ಜಗದ್ಗುರು ತ್ರಯರ ಸೇವೆ ಸಲ್ಲಿಸಿದ ಸೌಭಾಗ್ಯ ಅವರದು ಅವರ ಕ್ರಿಯಾಶೀಲ ಬದುಕನ್ನು ಕಂಡು ಅವರಿಗೆ “ಚೈತನ್ಯ ಚಿಲುಮೆ” ಪ್ರಶಸ್ತಿಯಿತ್ತು ರೇಶ್ಮೆ ಮಡಿ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.


ಪ್ರಾತಃಕಾಲದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜಾ ಸಂಭ್ರಮದಿಂದ ಜರುಗಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.


ಇದೇ ಸಂದರ್ಭದಲ್ಲಿ ಮಾತನಾಡಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಇದು ನಮ್ಮ ಜೀವನದ ಸೌಭಾಗ್ಯದ ಸುದಿನ. ಪ್ರತಿ ವರುಷ ಆಚರಿಸುವ ಜನ್ಮ ವರ್ಧಂತಿ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಯಾವಾಗಲೂ ಇದೆ. 76ನೇ ವರ್ಷದಲ್ಲಿ ಪಾದಾರ್ಪಣೆ ಮಾಡಿದ ಪರ್ವ ಕಾಲದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಂತಃಕರಣದ ಆಶೀರ್ವಾದ ನಮಗೆ ಇನ್ನಷ್ಟು ಶಕ್ತಿ ತಂದು ಕೊಟ್ಟಿದೆ. ಅನುದಿನವೂ ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶದ ಅರಿವನ್ನು ಮೂಡಿಸುವ ಕಾರ್ಯ ನಮ್ಮದಾಗಿದೆ. ಕೈ ಕಾಲುಗಳಲ್ಲಿ ಶಕ್ತಿಯಿರುವತನಕ ಶ್ರೀ ಪೀಠದ ಮತ್ತು ಸಮಾಜದ ಸೇವೆ ಮಾಡುವಂಥ ಶಕ್ತಿಯನ್ನು ಕೊಡಲೆಂದು ಪ್ರಾರ್ಥಿಸುತ್ತೇವೆ ಎಂದರು. ಮಾದನ ಹಿಪ್ಪರಗಿ ಶಾಂತವೀರ ಶಿವಾಚಾರ್ಯ ಸ್ವಾಮಿಗಳು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡು ಸಮಯೋಚಿತ ನುಡಿ ನಮನ ಸಲ್ಲಿಸಿದರು. ಶಿಕ್ಷಕ ವೀರೇಶ ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು.

Malnad Times

Share
Published by
Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

2 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago