ಕಾರಿಗೆ ₹ 3 ಸಾವಿರ ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿ !

0 0

ಶೃಂಗೇರಿ : 3000 ರೂ. ಪೆಟ್ರೋಲ್ ಹಾಕಿಸಿ ವಂಚಕರು ಪರಾರಿಯಾದ ಘಟನೆ ಪಟ್ಟಣದ ಹೊರವಲಯದ ಹೆಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ನಡದಿದೆ.


ರಿಜಿಸ್ಟ್ರೇಷನ್ ನಂಬರ್ ಇಲ್ಲದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಗ್ಯಾಂಗ್ ವೊಂದು ಹೆಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿ ಬಳಿಕ ತನಿಕೋಡು ಚೆಕ್ ಪೋಸ್ಟ್ ನಲ್ಲೂ ಪಾಸ್ ತೆಗೆದುಕೊಳ್ಳದೆ ಪರಾರಿಯಾಗಿದ್ದಾರೆ.

ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ವಂಚಕರ ಕೃತ್ಯ ಸೆರೆಯಾಗಿದ್ದು, ಈ ಗ್ಯಾಂಗ್‌ ನವರಿ ವಿರುದ್ಧ ಗೋಕಳ್ಳತನ ಆರೋಪವೂ ಇದೆ ಎನ್ನಲಾಗಿದೆ.

ಮಲೆನಾಡು ಭಾಗದಲ್ಲಿ ನಿಲ್ಲದ ಗೋಕಳ್ಳತನ ಪ್ರಕರಣಗಳು:

ಶೃಂಗೇರಿಯ ಬಿದರಗೋಡು ಸಮೀಪದಲ್ಲಿ ಅದೇ ಸ್ವಿಫ್ಟ್ ಕಾರಿನಲ್ಲಿ ಗೋಕಳ್ಳತನ ಮಾಡಲಾಗಿದೆ ಎನ್ನಲಾಗುತ್ತಿದ್ದು, ಆರೋಪಿಗಳಗಳನ್ನು ಪತ್ತೆಹಚ್ಚಬೇಕೆಂದು ಬಜರಂಗದಳ ಆಗ್ರಹಿಸಿದೆ.

Leave A Reply

Your email address will not be published.

error: Content is protected !!