Chikmagaluru News

ಬಸವಕಲ್ಯಾಣದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ 2025ರ ದಸರಾ ಧರ್ಮ ಸಮ್ಮೇಳನ

N.R.PURA ; ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಮರಸ್ಯ ಬೆಳೆಸಿಕೊಂಡು ಬರುತ್ತಿರುವ ನಾಡಿನ ಜನಮನ ಸೂರೆಗೊಂಡಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 2025ನೇ ಸಾಲಿನ ದಸರಾ ಧರ್ಮ ಸಮ್ಮೇಳನವನ್ನು ಐತಿಹಾಸಿಕ ನಗರ ಬಸವಕಲ್ಯಾಣದಲ್ಲಿ ಜರುಗಿಸಲು ನಿರ್ಧರಿಸಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಮಂಗಳವಾರ ಜರುಗಿದ ದಸರಾ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಇದುವರೆಗೆ ರಾಜ್ಯ ಹೊರ ರಾಜ್ಯಗಳಲ್ಲಿ 33 ದಸರಾ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು 34ನೇ ದಸರಾ ಮಹೋತ್ಸವ ಬಸವಕಲ್ಯಾಣದಲ್ಲಿ ಜರುಗುತ್ತಿರುವುದು ತಮಗೆ ಸಂತಸ ತಂದಿದೆ. ತರೀಕೆರೆ, ಜಮಖಂಡಿ, ಬಳ್ಳಾರಿ ಸೇರಿದಂತೆ ಹಲವು ನಗರಗಳಲ್ಲಿ 34ನೇ ದಸರಾಕ್ಕೆ ಬೇಡಿಕೆ ಇದ್ದಾಗ್ಯೂ ಅಬ್ಬಿಗೇರಿ ದಸರಾದಲ್ಲಿ ಶಾಸಕ ಶರಣು ಸಲಗರ ಸಂಗಡಿಗರು ಮಾಡಿದ ವಿನಂತಿಯನ್ನು ಪರಿಗಣಿಸಿ ಬಸವಕಲ್ಯಾಣಕ್ಕೆ ನೀಡಲಾಗಿದೆ. ಈ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಸರ್ವ ಸಮಾಜದ ಬಾಂಧವರು ಶ್ರಮಿಸಿ ಐತಿಹಾಸಿಕ ಸಮಾರಂಭವನ್ನಾಗಿ ಮಾಡುವ ಅಗತ್ಯವಿದೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಇದೇ ಸಂದರ್ಭದಲ್ಲಿ 34ನೇ ದಸರಾ ಸಮ್ಮೇಳನಕ್ಕೆ ರಚಿಸಿದ ಸ್ವಾಗತ ಸಮಿತಿಗೆ ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಗಳನ್ನು ಗೌರವಾಧ್ಯಕ್ಷರನ್ನಾಗಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಇವರನ್ನು ಅಧ್ಯಕ್ಷರನ್ನಾಗಿ ಹಾಗೂ ಶಾಸಕ ಶರಣು ಸಲಗರ ಇವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಇನ್ನುಳಿದ ಉಪಸಮಿತಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದೆಂದು ತಿಳಿಸಿದರು.

ನೇತೃತ್ವ ವಹಿಸಿದ ಹಾರಕೂಡ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳವರ ಐತಿಹಾಸಿಕ 34ನೇ ವರ್ಷದ ದಸರಾ ಸಮ್ಮೇಳನ ಬಸವಕಲ್ಯಾಣದಲ್ಲಿ ನಡೆಸಲು ಶ್ರೀ ಜಗದ್ಗುರುಗಳು ಒಪ್ಪಿಗೆ ನೀಡಿರುವುದು ನಮ್ಮೆಲ್ಲರ ಪುಣ್ಯ ವಿಶೇಷವಾಗಿದೆ. ಇದನ್ನು ಯಶಸ್ವಿಯಾಗಿ ಆಚರಿಸೋಣ ಎಂದು ಹೇಳಿ ದಸರಾ ಸಂದರ್ಭದಲ್ಲಿ 5 ದಿನದ ದಾಸೋಹ ಸೇವೆ ತಮ್ಮ ಶ್ರೀ ಮಠದಿಂದ ನಡೆಸಲಾಗುವುದು ಎಂದರು.

ಹಿರೆನಾಗಾಂವನ ಜಯಶಾಂತಲಿಂಗ ಸ್ವಾಮಿಗಳು ಮಾತನಾಡಿ, ದಸರಾ ಮಹೋತ್ಸವಕ್ಕೆ ಶ್ರೀ ಮಠದಿಂದ ರೂ.2.5 ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದ್ದು ವಿಶೇಷವಾಗಿತ್ತು. ತ್ರಿಪುರಾಂತದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮಾತನಾಡಿ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಂತೆ ಸಮಾರಂಭದ ಯಶಸ್ಸಿಗೆ ಶ್ರಮಿಸುವುದಾಗಿ ಹೇಳಿದರು.

ಶಾಸಕ ಶರಣು ಸಲಗರ ಮಾತನಾಡಿ, ನಾಡಿನಲ್ಲಿ ಸಕಲ ಮನುಕುಲಕ್ಕೆ ಅಭ್ಯುದಯವನ್ನು ಬಯಸುತ್ತ ಬಂದಿರುವ ಈ ಅಪೂರ್ವ ದಸರಾ ಸಮಾರಂಭಕ್ಕೆ ಸರ್ವ ಸಮಾಜದವರ ಸಹಕಾರ ಅಗತ್ಯವಾಗಿದ್ದು ಎಲ್ಲರೂ ಸಹಕರಿಸಲು ವಿನಂತಿಸಿದರು. ವಿವಿಧ ಮುಖಂಡರು ಸೇರಿ ಒಟ್ಟು 51 ಲಕ್ಷ ರೂ.ದೇಣಿಗೆ ವಾಗ್ದಾನ ಮಾಡಿದರು.

ಸಮಾರಂಭದಲ್ಲಿ ಶರಣಪ್ಪ ಬಿರಾದಾರ, ಬಸವರಾಜ ಕೋರಕೆ, ರಾಜಕುಮಾರ ಸಿಂಗಾಪುರ, ಸುನೀಲ ಪಾಟೀಲ್, ಮಲ್ಲಯ್ಯ ಹಿರೇಮಠ, ಸಿದ್ರಾಮಪ್ಪ ಗುದಗೆ, ಚಂದ್ರಶೇಖರ ಪಾಟೀಲ, ಮಲ್ಲಿನಾಥ ಹಿರೇಮಠ, ಸೋಮಶೇಖ ವಸ್ತ್ರದ, ಶ್ರೀಕಾಂತ ಬಡದಾಳೆ, ಮೇಘರಾಕ ನಾಗರಾಳೆ, ವೀರಣ್ಣ ಶೀಲವಂತ, ಎಂ.ಕೆ.ನಂದಿ, ಎ.ಜಿ.ಪಾಟೀಲ್, ಸುಭಾಷ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ರಮೇಶ ರಾಜೋಳೆ ನಿರೂಪಣೆ ಮಾಡಿದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>