ಹೊಂಬುಜದಲ್ಲಿ ರಕ್ತದಾನ ಶಿಬಿರ |
ರಕ್ತದಾನದಿಂದ ‘ಜೀವದಾನ’ದ ಪುಣ್ಯಪ್ರಾಪ್ತಿ ; ಶ್ರೀಗಳು

0 304

ರಿಪ್ಪನ್‌ಪೇಟೆ : ಆರೋಗ್ಯವಂತರಾಗಿ ದೈಹಿಕವಾಗಿ ಸಬಲರಾಗಿರಬೇಕು. ಸತ್ವಯುತ ಆಹಾರ ಸೇವನೆಯು ಶಾರೀರಿಕ ಕ್ರಿಯೆಗಳಿಗೆ ರಕ್ತ ಸಂಚಲನೆ ದೇಹದಲ್ಲಿ ಸಮರ್ಪಕವಾಗಿರಬೇಕು. ಸಹಜವಾಗಿ ಸೇವಿಸುವ ಆಹಾರದಲ್ಲಿ ವಿಟಮಿನ್, ಕಬ್ಬಿಣದ ಅಂಶ ಇರಬೇಕು. ವೈದ್ಯರ ಸಲಹೆಯಂತೆ ಆರೋಗ್ಯವಂತರ ರಕ್ತವನ್ನು ಆಕಸ್ಮಿಕ ಸಂದರ್ಭದಲ್ಲಿ ದಾನ ಮಾಡುವಂತರಾಗಬೇಕು ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಹೇಳಿದರು.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ, ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್ ಹುಂಚ ಹಾಗೂ ಮಾಜಿ ಸೈನಿಕರು ಹಾಗೂ ಶಿವಮೊಗ್ಗ ಆಶಾ ಜ್ಯೋತಿ ರಕ್ತಕೇಂದ್ರದವರೆಲ್ಲರ ಸಹಯೋಗದಲ್ಲಿ ಇಲ್ಲಿಯ ರಂಗರಾವ್ ಸ್ಮಾರಕ ಸಭಾಭವನ (ಶ್ರೀ ಪದ್ಮಾಂಬ ಪ್ರೌಢಶಾಲೆ) ದಲ್ಲಿ ಶನಿವಾರದಂದು ಬೆಳಿಗ್ಗೆ 10.00 ಗಂಟೆಗೆ ದಾಖಲೆಯ ಎರಡನೇ ಬಾರಿಗೆ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ರಕ್ತದಾನಿಗಳ ಸಂಖ್ಯೆ ವರ್ಧಿಸುವಂತಾಗಲೂ ಪ್ರತಿಯೋರ್ವರೂ ಸದೃಢ ಶಾರೀರಿಕ ಆರೋಗ್ಯ ಕಾಪಾಡಬೇಕು. ರಕ್ತದಾನಿಗಳಾವಂತೆ ಗ್ರಾಮಮಟ್ಟದಲ್ಲಿ ದಾನ ಶಿಬಿರ ಆಯೋಜಿಸಿರುವುದು ಔಚಿತ್ಯಪೂರ್ಣವಾದುದೆಂದರು. ರಕ್ತದಾನಿಗಳನ್ನು, ಸಂಯೋಜಕರನ್ನು ಶ್ರೀಗಳು ಜೀವದಾನದ ಪುಣ್ಯಪ್ರಾಪ್ತಿಯಾಗಲಿ ಎಂದು ಹರಸಿದರು.

ಈ ಸಂದರ್ಭದಲ್ಲಿ ಪ್ರವೀಣ ಎಸ್.ಪಿ. ಪೊಲೀಸ್ ಉಪನಿರೀಕ್ಷಕರು, ರಕ್ತದಾನಿ ಹಾಲೇಶ್ ಪೊಲೀಸ್, ಸಿಬ್ಬಂದಿಗಳಾದ ಅಲ್ಫಾಜ್ ಬಿ.ಯು. ಸೋಮಶೇಖರ್, ಉಮೇಶ್, ಮಧುಸೂದನ್ ಕಾರ್ಮಿಕ ಘಟಕ ಹುಂಚ, ಗ್ರಾಮ ಪಂಚಾಯತಿ ಸದಸ್ಯರಾದ ದೇವೇಂದ್ರ, ಪದ್ಮಾಂಬ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜೆ. ಪ್ರಹ್ಲಾದ್ ಹಾಗೂ ಮಾಜಿ ಸೈನಿಕರು ಉಪಸ್ಥಿತರಿದ್ದರು. ಒಟ್ಟು 55 ಜನ ರಕ್ತದಾನ ಮಾಡಿದರು.

Leave A Reply

Your email address will not be published.

error: Content is protected !!