N.R.PURA ; ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಸಮೀಪ ಯಕ್ಕಡಬೈಲು ಎಂಬಲ್ಲಿ ಗುರುವಾರ ನಡೆದಿದೆ.
ಮಡಬೂರು ಗ್ರಾಮದ ಕೃಷಿಕ ಕೆ.ಕೆ.ಏಲಿಯಾಸ್ (72) ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೇಯಲು ಕಾಡಿಗೆ ತೆರಳಿದ್ದ ಎಮ್ಮೆ ಬಾರದ ಹಿನ್ನೆಲೆಯಲ್ಲಿ ತಂದೆ ಮತ್ತು ಮಗ ಎಮ್ಮೆ ಹುಡುಕಿಕೊಂಡು ಕಾಡಿಗೆ ತೆರಳಿದ್ದರು. ಈ ವೇಳೆ ಆನೆ ಎದುರುಗೊಂಡಿದ್ದು ಆನೆಯನ್ನು ಕಂಡ ಮಗ ಸ್ಥಳದಿಂದ ಓಡಿ ಬಂದಿದ್ದಾನೆ. ಆದರೆ ತಂದೆ ಆನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನ.30 ರಂದು ಎನ್.ಆರ್.ಪುರ ತಾಲೂಕಿನ ಸೀತೂರು ಗ್ರಾಮದ ಉಮೇಶ್ ಗ್ರಾಮಕ್ಕೆ ನುಗ್ಗಿದ್ದ ಆನೆಯನ್ನು ಓಡಿಸಲು ಮುಂದಾದಾಗ ಆನೆ ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದರು. ಈ ಘಟನೆ ನಡೆದು 20 ದಿನ ಕಳೆದಿದ್ದು ಘಟನೆ ಮಾಸುವ ಮುನ್ನವೇ ಮಡಬೂರು ಗ್ರಾಮದ ಕೆ.ಕೆ.ಏಲಿಯಾಸ್ ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
ಮಲೆನಾಡು ಭಾಗದಲ್ಲಿ ಆನೆಗಳ ದಾಳಿಗೆ ಕಡಿವಾಣ ಹಾಕುವಂತೆ ಇಲ್ಲಿನ ಜನರು ಆಗ್ರಹಿಸಿದ್ದಾರೆ.

