ನೆರೆಮನೆ ನಾಯಿ ಬೊಗಳಿದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ !

0 517

ಎನ್.ಆರ್.ಪುರ: ನೆರೆಮನೆಯ ನಾಯಿ (Dog) ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ಎನ್.ಆರ್.ಪುರ (N.R.Pura) ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ.

ಪಕ್ಕದ ಮನೆಯ ಜೇಮ್ಸ್, ನಾಯಿ ಮಾಲೀಕ ಸುಂದರರಾಜ್ ಎಂಬವರ ಮೇಲೆ ಆಸಿಡ್ ದಾಳಿ ನಡೆಸಿದ ವ್ಯಕ್ತಿ.

ಸಾಕಿದ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರ ನಾಯಿಗೆ ಬೈಯುತ್ತಿರುವುದು ಕಂಡು ಪಕ್ಕದ ಮನೆಯ ಜೇಮ್ಸ್, ಅದು ತನಗೆ ಬೈಯುತ್ತಿದ್ದಾನೆ ಎಂದು ಭಾವಿಸಿ ಸುಂದರ್ ರಾಜ್ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಆಸಿಡ್ ದಾಳಿಗೊಳಗಾದ ಬಳಿಕ ಸುಂದರರಾಜ್ ಪರಿಸ್ಥಿತಿ ಗಂಭೀರವಾಗಿದ್ದು, ಎಡಗಣ್ಣಿಗೆ ಗಂಭೀರ ಗಾಯವಾಗಿರುವುದರಿಂದ ಕಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳು ಸುಂದರ್ ರಾಜ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಯಿ ಹೆಸರಿನಲ್ಲಿ ಜೇಮ್ಸ್ ಗೆ ಬೈಯುತ್ತಿರುವ ಆರೋಪದ ಹಿನ್ನೆಲೆ ಸುಂದರಾಜ್ ಮೇಲಿನ ಸಿಟ್ಟಿನಿಂದ ಆಸಿಡ್ ನಿಂದ ದಾಳಿ ಮಾಡಿದ್ದ ಜೇಮ್ಸ್ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!