ಪ್ರತಿಮಾ ಕೊಲೆ ಕೇಸ್ ; ಓರ್ವ ಪೊಲೀಸರ ವಶಕ್ಕೆ

0 740

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಬೆಂಗಳೂರು ಪೊಲೀಸರು ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಈತ ಪ್ರತಿಮಾ ಅವರ ಹಳೆ ಕಾರು ಚಾಲಕನಾಗಿದ್ದ.


ಹಲವು ವರ್ಷಗಳಿಂದ ಕಾರು ಚಾಲಕನಾಗಿದ್ದ ಕಿರಣ್ ನನ್ನು ಪ್ರತಿಮಾ ಅವರು ತೆಗೆದುಹಾಕಿದ್ದರು. ಕೆಲಸದಿಂದ ತೆಗದುಹಾಕಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಿರಣ್ ಕಳೆದ ಐದು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಮಾಡುತ್ತಿದ್ದ. ಪೊಲೀಸ್ ವಿಚಾರಣೆ ವೇಳೆ ಆರೋಪಿ ಕಿರಣ್ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಕೆಲಸದಿಂದ ತೆಗೆದು ಹಾಕಿರುವುದರ ಬಗ್ಗೆ ಪ್ರತಿಮಾ ಮೇಲೆ ಕೋಪಗೊಂಡಿದ್ದ ಕಿರಣ್ ಮನೆಗೆ ಬಂದು ಕೊಲೆ ಮಾಡಿ ಚಾಮರಾಜನಗರಕ್ಕೆ ಪರಾರಿಯಾಗಿದ್ದು, ಆತನ ಮೊಬೈಲ್ ಲೋಕೆಷನ್ ಆಧರಿಸಿ ಪತ್ತೆ ಮಾಡಿ ಸುಬ್ರಮಣ್ಯಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ರೇಡ್ ಹೋಗುವ ಮಾಹಿತಿಯನ್ನು ಕಿರಣ್ ಲೀಕ್ ಮಾಡುತ್ತಿದ್ದು ಈ ಕಾರಣಕ್ಕೆ ಪ್ರತಿಮಾ ಅವರು ಕಿರಣ್ ಗೆ ಎಚ್ಚರಿಕೆ ನೀಡಿದ್ದರು.‌ ಮಾತ್ರವಲ್ಲದೇ ಕಾರು ಅಕ್ಸಿಡೆಂಟ್ ಮಾಡಿರುವ ಬಗ್ಗೆಯೂ ಮಾಹಿತಿ ಇದ್ದು ಈ ಎಲ್ಲಾ ಕಾರಣಗಳಿಗೆ ಪ್ರತಿಮಾ ಆತನನ್ನು ಕೆಲಸದಿಂದ ತೆಗೆದುಹಾಕಿದ್ದರು ಎನ್ನಲಾಗಿದೆ.

ನಾಲ್ಕು ವರ್ಷದಿಂದ ಪ್ರತಿಮಾ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ. 10 ದಿನದ ಹಿಂದೆ ಕಿರಣ್​​ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆರೋಪಿ ಕಿರಣ್​ನನ್ನ ಮಹದೇಶ್ವರಬೆಟ್ಟದಲ್ಲಿ ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಪ್ರಕರಣದ ತನಿಖೆ ಮುಂದುವರಿದಿದೆ ಎಂದರು.

ತೀರ್ಥಹಳ್ಳಿ ತಾಲ್ಲೂಕಿನ ತುಡ್ಕಿ ಮೂಲದ ಪ್ರತಿಮಾಗೆ 18 ವರ್ಷಗಳ ಹಿಂದೆ ವಿವಾಹವಾಗಿತ್ತು. ನಂತರ ಭೂ ವಿಜ್ಞಾನ ಇಲಾಖೆಯಲ್ಲಿ ನೌಕರಿ ದೊರೆತಿದ್ದರಿಂದ ಪ್ರತಿಮಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. ಹಲವು ವರ್ಷ ರಾಮನಗರ ಜಿಲ್ಲೆಯಲ್ಲಿ ಕೆಲಸ ಮಾಡಿದ್ದ ಪ್ರತಿಮಾ ನಂತರ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಎಂದಿನಂತೆ ಕಚೇರಿ ಕೆಲಸ ಮುಗಿದ ಮೇಲೆ ಶನಿವಾರ ರಾತ್ರಿ 8 ಗಂಟೆಗೆ ಕಚೇರಿಯಿಂದ ಕಾರು ಚಾಲಕ ಮನೆಗೆ ಡ್ರಾಪ್‌ ಮಾಡಿ ತೆರಳಿದ್ದ.‌ಬಳಿಕ ಹಂತಕರು ಬಂದು ಕೊಲೆ ಮಾಡಿ ಹೋಗಿದ್ದಾರೆ. ಮನೆಯ ಒಳಗೆ ಬಂದು ಕೊಲೆ ಮಾಡಿ ಹೋಗಿರುವುದರಿಂದ ಇದು ಪ್ರೀ ಪ್ಲಾನ್ ಮರ್ಡರ್ ಎಂದು ಶಂಕಿಸಲಾಗಿತ್ತು.

ಭಾನುವಾರ ಕಾರ್ಯಕ್ರಮ ಒಂದಕ್ಕೆ ಹೋಗಬೇಕಿದ್ದರಿಂದ ರಾತ್ರಿ ಪ್ರತಿಮಾರಿಗೆ ಅವರ ಸಹೋದರ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆಯೂ ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ಕೆಳಗಿನ ಮನೆಯವರಿಗೆ ಫೋನ್ ಮಾಡಿ‌ನೋಡಲು ತಿಳಿಸಿದ್ದಾರೆ. ಗ್ರೌಂಡ್ ಫ್ಲೋರ್ ನಲ್ಲಿ ವಾಸವಿದ್ದ ಮನೆಯವರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ. ಪರಿಚಿತರಿಂದಲೇ ಕೊಲೆಯಾಗಿರುವ ಅನುಮಾನ ಇರುವ ಹಿನ್ನೆಲೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave A Reply

Your email address will not be published.

error: Content is protected !!