ಪೊಲೀಸರ ಕೈ ಸೇರಿತು ದೇವರ ಹುಂಡಿಗೆ ಸೇರಬೇಕಾಗಿದ್ದ 2.50 ಲಕ್ಷ ರೂ.

0 83

ಮೂಡಿಗೆರೆ : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ರೂ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಚೆಕ್ ಪೋಸ್ಟ್ ಅನ್ನು ನಿರ್ಮಿಸಿಕೊಂಡಿದ್ದಾರೆ. ಈ ವೇಳೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ರೂ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದೇವರ ಹುಂಡಿಗೆ ಸೇರಬೇಕಾಗಿದ್ದ 2.50 ಲಕ್ಷ ರೂ. ಪೊಲೀಸರ ಕೈ ಸೇರಿತು:

ವೈದ್ಯಾಧಿಕಾರಿಯೊಬ್ಬರು ಸಾಗಿಸುತ್ತಿದ್ದ ದಾಖಲೆಗಳಿಲ್ಲದ ಕಾರಣಕ್ಕೆ 2.50 ಲಕ್ಷ ರೂ. ನಗರದನ್ನು ಚೆಕ್‌ಪೋಸ್ಟ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ದೇವರ ಹುಂಡಿ ಸೇರಬೇಕಿದ್ದ ಹಣ ಪೊಲೀಸರ ಕೈ ಸೇರಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ಫಾರ್ಚುನರ್ ಕಾರೊಂದನ್ನು ತಡೆದು ತಪಾಸಣೆ ನಡೆಸಿದ ವೇಳೆ ಈ ಹಣ ಪತ್ತೆಯಾಗಿದೆ. ನಗದು ಸಾಗಿಸುತ್ತಿದ್ದ ಪಾವಗಡದ ವೈದ್ಯಾಧಿಕಾರಿ ಹಣವನ್ನು ಧರ್ಮಸ್ಥಳ ಹಾಗೂ ಕಟೀಲು ದೇವಸ್ಥಾನದ ಹುಂಡಿಗೆ ಸಲ್ಲಿಸಲು ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಹಣದ ಮೂಲಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಅದನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

50 ಸಾವಿರ ರೂ.ವರೆಗೆ ಮಾತ್ರ ಅವಕಾಶ:

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ವ್ಯಕ್ತಿ 50 ಸಾವಿರ ರೂ. ನಗದು ಹೊಂದಲು ಅವಕಾಶವಿದೆ. ಅದಕ್ಕಿಂತ ಮೇಲ್ಪಟ್ಟು ನಗದು ಹೊಂದಿದ್ದರೆ ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಹಣದ ಮೂಲ ಯಾವುದು? ಸೂಕ್ತ ದಾಖಲೆಗಳೊಂದಿಗೆ ಅದನ್ನು ಯಾವ ಉದ್ದೇಶಕ್ಕಾಗಿ ಕೊಂಡೊಯ್ಯಲಾಗುತ್ತಿದೆ ಎಂಬುದನ್ನು ಚೆಕ್ ಪೋಸ್ಟ್‌ಗಳಲ್ಲಿ ಹೇಳಬೇಕಾಗುತ್ತದೆ. ಒಂದು ವೇಳೆ ಆತ ನೀಡುತ್ತಿರುವ ಕಾರಣ, ದಾಖಲೆ ಸಮರ್ಪಕವಾಗಿಲ್ಲ ಎಂಬುದು ದೃಢಪಟ್ಟರೆ ಹಣ ಜಪ್ತಿ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.

Leave A Reply

Your email address will not be published.

error: Content is protected !!