ಪದವಿಪೂರ್ವ ಕಾಲೇಜಿನ ಟ್ರೆಸ್ ಅಳವಡಿಕೆ – ಅವೈಜ್ಞಾನಿಕ ಕಾಮಗಾರಿ : ತಕ್ಷಣ ಕಾಮಗಾರಿ ತಡೆಗೆ ಹಿಡಿಯಲು ಸಾರ್ವಜನಿಕರ ಆಗ್ರಹ

ಹೊಸನಗರ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೇಲ್ಮಹಡಿ ಕಟ್ಟಡಕ್ಕೆ ನಿರ್ಮಾಣ ಮಾಡುತ್ತಿರುವ ಕಡ್ಡಿಣದ ಟ್ರೆಸ್ ಅಳವಡಿಕೆ ಕಾಮಗಾರಿ ಅವೈಜ್ಞಾನಿಕವಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಭಾರೀ ಅನಾನುಕೂಲ ಆಗಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಕಾಲೇಜಿನ ಕಟ್ಟಡದ ಎರಡನೇ ಮಹಡಿಗೆ ಅಳವಡಿಸ ಬೇಕಿದ್ದ ಕಬ್ಬಿಣದ ಟ್ರೆಸ್ ಅನ್ನು ಮೊದಲ ಮಹಡಿ ಸಮಾನಂತರವಾಗಿ ಅಳವಡಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ಮಳೆಗಾಲದಲ್ಲಿ ಭಾರೀ ಶಬ್ದ ಉಂಟಾಗಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನಾನುಕೂಲವಾಗಲಿದೆ. ಅಲ್ಲದೇ ಮಳೆ ನೀರು ತಡೆಯುವ ಮೂಲ ಉದ್ದೇಶಕ್ಕೆ ಧಕ್ಕೆ ಉಂಟಾಗಲಿದೆ. ಲಕ್ಷಾಂತರ … Continue reading ಪದವಿಪೂರ್ವ ಕಾಲೇಜಿನ ಟ್ರೆಸ್ ಅಳವಡಿಕೆ – ಅವೈಜ್ಞಾನಿಕ ಕಾಮಗಾರಿ : ತಕ್ಷಣ ಕಾಮಗಾರಿ ತಡೆಗೆ ಹಿಡಿಯಲು ಸಾರ್ವಜನಿಕರ ಆಗ್ರಹ