ಕ್ರೀಡಾಕೂಟ ; ಕುಂಬಳೆ ಶಾಲೆಗೆ ಸಮಗ್ರ ಪ್ರಶಸ್ತಿ
ಹೊಸನಗರ : 2023-24ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಿಟ್ಟೂರು – ಸಂಪೆಕಟ್ಟೆ ಕ್ಲಸ್ಟರ್ ನ ಸ.ಹಿ.ಪ್ರಾ ಶಾಲೆ ಕುಂಬಳೆ ಇಲ್ಲಿನ ವಿದ್ಯಾರ್ಥಿಗಳು ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಬಾಲಕರ ವಿಭಾಗ:
- ಥ್ರೋ ಬಾಲ್ ಪ್ರಥಮ
- ರಿಲೇ ಪ್ರಥಮ – (ಧನುಷ್ ಜಿ ಎಸ್, ರೋಹಿತ್, ಧನುಷ್ ಕುಮಾರ್ ಕೆ ಆರ್, ಯಶವಂತ ಜೆ ಎಂ)
- ಎತ್ತರ ಜಿಗಿತ – ದ್ವಿತೀಯ (ಧನುಷ್ ಜಿ ಎಸ್)
- 200 ಮೀ. ಓಟ – ತೃತೀಯ (ಧನುಷ್ ಕುಮಾರ್ ಕೆ ಆರ್)
- 400 ಮೀ. ಓಟ – ತೃತೀಯ (ಯಶವಂತ ಜೆ ಎಂ)
- ಗುಂಡು ಎಸೆತ – ದ್ವಿತೀಯ (ಧನುಷ್ ಜಿ ಎಸ್)

ಬಾಲಕಿಯರ ವಿಭಾಗ:
- ಥ್ರೋ ಬಾಲ್ ಪ್ರಥಮ
- ಗುಂಡು ಎಸೆತ ಪ್ರಥಮ – (ದೀಪಿಕಾ ಕೆ ಎಂ)
ವಿಜಯಿಶಾಲಿಗಳಾದ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ, ಮುಖ್ಯ ಶಿಕ್ಷರಾದ ಚಂದ್ರಶೇಖರ ಎಸ್, ಸಹ ಶಿಕ್ಷಕರಾದ ಶ್ರವಣ ಕುಮಾರ ಯು ಎಂ, ಜೊತೆಗೆ ಎಸ್ಡಿಎಂಸಿ ಸದಸ್ಯರು, ಪೋಷಕರು, ಗ್ರಾಮಸ್ಥರು, ನಿಟ್ಟೂರು – ಸಂಪೇಕಟ್ಟೆ ಕ್ಲಸ್ಟರ್ ನ ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.