ಕ್ರೈಸ್ತ ಬಾಂಧವರಿಂದ ಮೊಂತಿ ಹಬ್ಬ ಸಂಭ್ರಮದಿಂದ ಆಚರಣೆ
ಹೊಸನಗರ : ಪಟ್ಟಣದ ಸಂತ ಅಂತೋನಿ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಮೊಂತಿ ಹಬ್ಬವನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಹೊಸ ಬಟ್ಟೆ ಧರಿಸಿ ವರ್ಣ ರಂಜಿತವಾಗಿ ಆಚರಿಸಿದರು.

ತೆನೆ ಹಬ್ಬವೆಂದು ಕರೆಯಲ್ಪಡುವ ಈ ಹಬ್ಬದ ಪ್ರಯುಕ್ತ ಚರ್ಚ್‌ನಲ್ಲಿ ವಿಶೇಷ ಬಲಿಪೂಜೆ ಹೊಸ ತೆನೆಯ ಆಶೀರ್ವಚನ ವಿತರಣೆ ಮೆರವಣಿಗೆ ಪುಷ್ಪಾರ್ಚನೆ ಮೂಲಕ ಧರ್ಮ ಗುರುಗಳಾದ ರೆವರೆಂಡ್ ಫಾದರ್ ಸೈಮನ್ ಹೊರಟ ರವರು ಸಂದೇಶ ಹಾಗೂ ಶುಭಾಶಯ ವಿನಿಮಯ ಮಾಡಿದರು.
ಕೃಷ್ಣ ಬಾಂಧವರು ಕಬ್ಬು ಹಾಗೂ ಸಿಹಿ ತಿಂಡಿ ವಿತರಣೆ ಹಾಗೂ ಸ್ಥಳೀಯವಾಗಿ ಬೆಳೆಯುವ ತರಕಾರಿ ಪಲ್ಯಗಳು, ಸಾರು, ಸಿಹಿ ಪಾಯಸದಿಂದ ಕೂಡಿದ ಸಸ್ಯಾಹಾರಿ ಭೋಜನ ತೆನೆ ಹಬ್ಬದ ವಿಶೇಷವಾಗಿತ್ತು.
