ಹೊಸನಗರ ; ಭಾನುವಾರ ದೀಪಾವಳಿ ನೋನಿ ಪೂಜೆ

0 911

ಹೊಸನಗರ: ಸುಮಾರು ವರ್ಷಗಳ ಹಿಂದಿನಿಂದ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಮಾಳಿಗೆ ಮನೆ ಭೂತರಾಯ ಹಾಗು ಪರಿವಾರ ದೇವರಿಗೆ ದೀಪಾವಳಿ ಹಬ್ಬದ ನೋನಿ ಪೂಜೆಯನ್ನು ನವೆಂಬರ್ 12ರ ಭಾನುವಾರ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಪೂಜೆ ಸಮಿತಿಯ ಅಧ್ಯಕ್ಷ, ಕೃಷಿಕ ರತ್ನಾಕರ್ ಹಾಗೂ ಕ್ಯಾಂಟಿನ್ ಗಣೇಶ್‌ರವರು ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ಎಪಿಎಂಸಿ ಹಿಂಭಾಗದಲ್ಲಿರುವ ಮಾಳಿಗೆಮನೆ ಭೂತರಾಯನ ದೇವಸ್ಥಾನದ ಆವರಣದಲ್ಲಿ ಪೂಜೆ ಕಾರ್ಯಕ್ರಮ ನಡೆಯಲಿದ್ದು ನಂತರ ಎಪಿಎಂಸಿ ಮುಂಭಾಗದಲ್ಲಿರುವ ಭೂತರಾಯನ ಗುಡಿಯಲ್ಲಿ ಪೂಜೆ ಕಾರ್ಯಕ್ರಮ ನಡೆಸಲಾಗುತ್ತದೆ. ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪೂಜಾ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಇನ್ನೂ ಸುಮಾರು 5 ವರ್ಷಗಳ ಹಿಂದೆ ಪ್ರತಿ ವರ್ಷ ಹೆಚ್ಚು ಮನುಷ್ಯ ಬಲಿ ಪಡೆಯುತ್ತಿದ್ದ ಕಾಲೇಜ್ ಸಮೀಪವಿರುವ ಮಾವಿನಮರ ಭೂತರಾಯ, ಚೌಡೇಶ್ವರಿ ಹಾಗೂ ರಣಭೂತ ಸಂವಾರ ದೇವಸ್ಥಾನದ ಆವರಣದಲ್ಲಿ ಭಾನುವಾರ ಬೆಳಿಗ್ಗೆಯಿಂದ ದೀಪಾವಳಿಯ ಹಬ್ಬದ ಪ್ರಯುಕ್ತ ನೋನಿ ಪೂಜೆಯನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಕ್ಯಾಂಟಿನ್ ಗಣೇಶ್‌ರವರು ತಿಳಿಸಿದ್ದಾರೆ.

ಬೆಳಿಗ್ಗೆ 10 ಗಂಟೆಯಿಂದ ದೇವಸ್ಥಾನದ ಆವರಣದಲ್ಲಿ ಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ನಾವು ಪ್ರತಿ ವರ್ಷ ಭೂತರಾಯ ಸಂವಾರ ದೇವರಿಗೆ ಪೂಜೆ ನೀಡುತ್ತಿರುವುದರಿಂದ ಇತ್ತಿಚೀನ ದಿನದಲ್ಲಿ ಯಾವುದೇ ರಸ್ತೆ ಅಪಘಾತವಾಗಿಲ್ಲ. ಸಾವು-ನೋವು ಸಂಭವಿಸಿಲ್ಲ. ಈ ಭಾಗದ ಭಕ್ತರೂ ಈ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಕೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!