ಹೊಸನಗರ ; ಸೆ.15 ರಂದು ವೀರಶೈವ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ

0 9


ಹೊಸನಗರ: ಪಟ್ಟಣದಲ್ಲಿ ಸುಮಾರು 16 ವರ್ಷಗಳಿಂದ ಬಾಡಿಗೆ ಕಟ್ಟಡಗಳಲ್ಲಿ ವಹಿವಾಟು ನಡೆಸುತ್ತಿರುವ ಹೊಸನಗರದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ವೀರಶೈವ ಪತ್ತಿನ ಸಹಕಾರ ಸಂಘದ ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ಜೆಸಿಎಂ ರಸ್ತೆಯಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಸೆಪ್ಟೆಂಬರ್ 15 ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಪಿ ನಂಜುಂಡಪ್ಪನವರು ಹೇಳಿದರು.


ಹೊಸನಗರದ ಸುದ್ಧಿಮನೆಯಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿ, ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಹೆಚ್.ಪಿ ನಂಜುಂಡಪ್ಪನವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಹೆಚ್.ಎಲ್ ಷಡಾಕ್ಷರಿ, ಮಾಜಿ ಅಧ್ಯಕ್ಷರಾದ ಎಂ.ಬಿ. ಚನ್ನವೀರಪ್ಪ, ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ ಎಂ.ಎಂ. ಪರಮೇಶ್, ಜಿ.ಎನ್ ಸುಧೀರ್, ಮಾಜಿ ನಿರ್ದೇಶಕರಾದ ಹೆಚ್. ನಾಗರಾಜ್ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರಾದ ವಾಸುದೇವ, ಸಂಘದ ನಿರ್ದೇಶಕರಾದ ಬಿ,ಹೆಚ್. ಬಸಪ್ಪ, ಹೆಚ್. ಮಲ್ಲಿಕ್, ರಾಜಪ್ಪ ಗೌಡ ಸಿದ್ಧವೀರಪ್ಪ, ಎಂ.ಎನ್ ಶೇಖರಪ್ಪ, ಶಿವಾನಂದ ಈಶ್ವರಪ್ಪ ಗೌಡ, ಯೋಗೇಶ್ ಕುಮಾರ್, ಜ್ಯೋತಿ ಪ್ರಶಾಂತ್, ಮಮತಾ ಚಂದ್ರಶೇಖರ್, ಮಂಜಪ್ಪ ಇನ್ನೂ ಮುಂತಾದವರು ಆಗಮಿಸಲಿದ್ದು ಈ ಕಾರ್ಯಕ್ರಮಕ್ಕೆ ಹೊಸನಗರದ ಸಾರ್ವಜನಿಕರು ಸಹಕಾರಿ ಸಂಘಗಳ ಅಧ್ಯಕ್ಷ ಸದಸ್ಯರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.


11 ಗಂಟೆಗೆ ಸರ್ವಸದಸ್ಯರ ಸಭೆ:

ನೂತನ ಕಟ್ಟಡದಲ್ಲಿ ಉದ್ಘಾಟನೆಯ ನಂತರ 11ಗಂಟೆಗೆ ವೀರಶೈವ ಪತ್ತಿ ಸಹಕಾರ ಸಂಘ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದ್ದು ಇದೇ ದಿನ ಸಂಜೆ ನೂತನ ಕಟ್ಟಡದ ಕೆಳ ಭಾಗದಲ್ಲಿ ಅಡಿಕೆ ಮಾರಾಟ ಪರಿಷ್ಕರಣೆ ಘಟಕವನ್ನು ಉದ್ಘಾಟಿಸಲಾಗುತ್ತದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಂಘದ ನಿರ್ದೇಶಕ ಸದಸ್ಯರು ಉಪಸ್ಥಿತರಿರಬೇಕೆಂದು ಈ ಮೂಲಕ ಕೇಳಿಕೊಂಡರು.


ಈ ಪತ್ರಿಕಾಘೋಷ್ಠಿಯಲ್ಲಿ ಉಪಾಧ್ಯಕ್ಷರಾದ ಬಸಪ್ಪ ಬಿ.ಹೆಚ್, ಎಂ.ಎನ್ ಶೇಖರಪ್ಪ, ಹೆಚ್. ಮಲ್ಲಿಕ್, ಜ್ಯೋತಿ ಪ್ರಶಾಂತ್, ಮಮತಾ ಚಂದ್ರಶೇಖರ್, ಮಂಜಪ್ಪ, ಯೋಗೇಶ್, ಸಿದ್ಧವೀರಪ್ಪ, ಸತೀಶ, ವಿಶ್ವೇಶ್ವರ, ಈಶ್ವರಪ್ಪ ಗೌಡ, ರಾಜಪ್ಪ ಗೌಡ, ಶಿವಾನಂದ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀತಾ ಗಿರೀಶ್, ವಸೂಲಿ ಅಧಿಕಾರಿ ಲೋಕೇಶ್, ಸಹಕಾರ್ಯದರ್ಶಿ ಕು.ಅರ್ಪಿತ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!