ಶ್ರೀಕ್ಷೇತ್ರ ಹೊಂಬುಜ ; ಮಹಾರಥೋತ್ಸವ ಭಕ್ತಿಭಾವದ ಸಂಗಮ – ಶ್ರೀಗಳು

Written by Mahesha Hindlemane

Published on:

ಹೊಂಬುಜ ; ಐತಿಹಾಸಿಕ, ಜೈನ ಧಾರ್ಮಿಕ ಹಿನ್ನೆಲೆಯ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ದಿವ್ಯ ಪಾವನ ಸನ್ನಿಧಿಯಲ್ಲಿ ವಾರ್ಷಿಕ ಮಹಾರಥೋತ್ಸವವು ಮೂಲಾ ನಕ್ಷತ್ರದಲ್ಲಿ ರಥಾರೋಹಣವು ಜಿನಾಗಮೋಕ್ತ ವಿಧಿಪೂರ್ವಕ 12.30 ಗಂಟೆಗೆ ನೆರವೇರಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶ್ರೀ ಪಾರ್ಶ್ವನಾಥ ಕೀ ಜೈ, ಶ್ರೀ ಪದ್ಮಾವತಿ ದೇವಿ ಕೀ ಜೈ, ಅಹಿಂಸಾ ಪರಮೋಧರ್ಮಕೀ ಜೈ, ಜೈನ ಧರ್ಮಕೀ ಎಂಬ ಭಕ್ತಿಭಾವದ ಜಯಘೋಷಗಳು ಊರ ಪರವೂರ ಭಕ್ತರಿಂದ ಮೊಳಗಿತು. ಗಜರಾಣಿ ಐಶ್ವರ್ಯ ಮಹಾರಥಾರೋಹಣ ಜಿನಬಿಂಬ ದರ್ಶನ ಮಾಡಿ ನಮಸ್ಕರಿಸುವ ದೃಶ್ಯ ಕಂಡು ಭಕ್ತರೂ ಭಾವಪರವಶರಾದರು.

ಶ್ರೀ ಜೈನಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಮೂಲಾ ನಕ್ಷತ್ರದಲ್ಲಿ ನಿತ್ಯವಿಧಿ ಸಹಿತ ಮಹಾನೈವೇದ್ಯ ಪೂಜೆ, ಬಲಿ ಉತ್ಸವ ನೆರವೇರಿದವು.

ಕಂಬದಹಳ್ಳಿ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಧಾರ್ಮಿಕ ವಿಧಿಗಳಲ್ಲಿ ಉಪಸ್ಥಿತರಿದ್ದರು.

ಸಂಜೆ ಮಹಾರಥಾಯಾತ್ರಾ ಶೋಭಾಯಾತ್ರೆಯಲ್ಲಿ ಭಕ್ತರು ಭಾಗಿಯಾದರು. ಸೇವಾಕರ್ತರಾದ ಶ್ರೀ ವಿಜಯ ಪಾಟ್ನಿ, ಶ್ರೀಮತಿ ಸರಿತಾ ಪಾಟ್ನಿ, ಧನಲಕ್ಷ್ಮಿ ಪರಿವಾರ, ಇಂಫಾಲ್, ಮಣಿಪುರ ಬಳಗದವರನ್ನು ಪರಮಪೂಜ್ಯ ಸ್ವಸ್ತಿಶ್ರೀಗಳವರು ಹರಸಿದರು.

Leave a Comment