24.3 C
Shimoga
Friday, December 9, 2022

MSIL ಮದ್ಯ ಮಾರಾಟ ಮಳಿಗೆ ಅನುಮತಿ ರದ್ದತಿಗೆ ದಸಂಸ ಮನವಿ

ಶಿವಮೊಗ್ಗ : ಹೊಸನಗರ ತಾಲೂಕಿನ ಕಾಳಿಕಾಪುರ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ನೀಡಿದ್ದ ಅನುಮತಿ ರದ್ದುಪಡಿಸುವಂತೆ ಕೋರಿ ದಲಿತ ಸಂಘರ್ಷ ಸಮಿತಿಯಿಂದ ಇಂದು ಜಿಲ್ಲಾಧಿಕಾರಿ ಮತು ಜಿಲ್ಲಾ ಅಬಕಾರಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಹೊಸನಗರ ತಾಲ್ಲೂಕಿನ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಳಿಕಾಪುರ ಗ್ರಾಮ ಎಂಬಲ್ಲಿ ರಾಜ್ಯ ಎಂ.ಎಸ್.ಐ.ಎಲ್. ಸಂಸ್ಥೆಯು ನೂತನವಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಚಿಲ್ಲರೆ ಮದ್ಯ ಮಾರಾಟ ಮಳಿಗೆಯನ್ನು ತೆರೆಯಲು ಕಾಳಿಕಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರ ವಿರೋಧ ಇರುವುದರಿಂದಲೂ ಹಾಗೂ ಸದರಿ ಅಂಗಡಿಯನ್ನು ತೆರೆದಲ್ಲಿ ಅಶಾಂತಿ ಉಂಟಾಗುವ ಸಂಭವವು ಹೆಚ್ಚಾಗುವುದರಿಂದಲೂ ಹಾಗೂ ಈ ಅಂಗಡಿಯ ಸಮೀಪದಲ್ಲಿ ಸರ್ಕಾರದ ಶಾಲೆ ಇದ್ದು ಈ ಶಾಲೆಗೆ ಮಕ್ಕಳು ಓಡಾಡುವುದರಿಂದ ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಸದರಿ ಉದ್ದೇಶಿತ ಚಿಲ್ಲರೆ ಮದ್ಯ ಮಾರಾಟ ಮಳಿಗೆಯನ್ನು ತೆರೆಯಲು ಅವಕಾಶ ಕೊಡಬಾರದೆಂದು ಹಾಗೂ ಒಂದು ವೇಳೆ ಈಗಾಗಲೇ ಪರವಾನಗಿಯನ್ನು ನೀಡಿದ್ದಲ್ಲಿ ನಮ್ಮ ಈ ಮನವಿಯನ್ನು ತಕರಾರು ಅರ್ಜಿ ಎಂದು ಪರಿಗಣಿಸಿ ನೀಡಿದ್ದ ಪರವಾನಗಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಪಡಿಸುವ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ಕೊಡಬಾರದು.

ಅಲ್ಲದೇ ಈ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಕೃಷಿ ಪರಿಸರದಲ್ಲಿ ಸಮೀಪದಲ್ಲಿ ಹಾಗೂ ಸಣ್ಣ-ಪುಟ್ಟ ಕೂಲಿ ಕಾರ್ಮಿಕರು ವಾಸವಾಗಿರುವುದರಿಂದ ಅವರ ಆರ್ಥಿಕ ಹಿತದೃಷ್ಟಿಯನ್ನು ಪರಿಗಣಿಸಿ ನಮ್ಮ ಮನವಿಯನ್ನು ಅಂಗೀಕರಿಸಬೇಕಾಗಿ ಕೋರುತ್ತೇವೆ. ಅಲ್ಲದೇ ಈ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದಲೂ ಮದ್ಯಪಾನ ಮುಕ್ತವಾಗಿರುವುದರಿಂದ ಈಗಾಗಲೇ ಹಲವು ಮಹಿಳಾ ಸಂಘಗಳು, ಸಾಮಾಜಿಕ ಕಳಕಳಿಯುಳ್ಳ ದಲಿತ ಸಂಘರ್ಷ ಸಮಿತಿ ಮತ್ತು ಇತರೆ ಸಂಘ ಸಂಸ್ಥೆಗಳು ಈ ಉದ್ದೇಶಿತ ಮಾರಾಟ ಮಳಿಗೆಯನ್ನು ತೆರೆಯದಂತೆ ಧರಣಿ ಸತ್ಯಾಗ್ರಹ ನಡೆಸಿರುವುದನ್ನು ತಮ್ಮ ಆದ್ಯ ಗಮನಕ್ಕೆ ತರಲು
ಬಯಸುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಅರಳಿಸುರಳಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಜೇನಿ ಗ್ರಾ.ಪಂ. ಅಧ್ಯಕ್ಷೆ ವಿನೋಧ, ಉಪಾಧ್ಯಕ್ಷೆ ಅಕ್ಷತಾ, ಸದಸ್ಯೆ ಈರಮ್ಮ, ಪ್ರಮುಖರಾದ ಜಯನಗರ ಗುರು ಸೇರಿದಂದೆ ಸ್ತ್ರೀ ಶಕ್ತಿ ಸಂಘದ ಸದಸ್ಯರು ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!