ಸಾಗರ: ಮಂಗಳೂರಿನಿಂದ ಹಾವೇರಿಗೆ ಹೋಗುತ್ತಿದ್ದ 370ಕ್ಕೂ ಅಧಿಕ ಗ್ಯಾಸ್ ಸಿಲಿಂಡರ್ ಸಾಗಣೆ ಮಾಡುತ್ತಿದ್ದ ಲಾರಿ ಆನಂದಪುರ ಪಟ್ಟಣದ ಬಳಿ ಪಲ್ಟಿಯಾಗಿದೆ.
ಪ್ರತಿನಿತ್ಯ ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಣೆ ಮಾಡುತ್ತಿದ್ದ ಲಾರಿಯ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಮಂಗಳೂರಿನಿಂದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ಹೋಗುತ್ತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ತಾಲೂಕಿನ ಆನಂದಪುರ ಪಟ್ಟಣದ ಬಳಿ ಪಲ್ಟಿಯಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜೊತೆಗೆ, ಯಾವುದೇ ಸಿಲಿಂಡರ್‌ಗಳು ಸ್ಪೋಟಗೊಳ್ಳದ ಕಾರಣ ಸ್ಥಳದಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿದುಬಂದಿದೆ.