ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ನಾಮಪತ್ರ ಸಲ್ಲಿಕೆ ; ಭಾರಿ ಜನಸ್ತೋಮ

0 46

ಸಾಗರ : ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಮೊದಲು ಸಾಗರದ ಗಣಪತಿ ದೇವಸ್ಥಾನದಲ್ಲಿ ದಂಪತಿ ಸಮೇತ ಪೂಜೆ ಸಲ್ಲಿಸಿ ಕಾಂಗ್ರೆಸ್ ಕಚೇರಿ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಇವತ್ತು ಒಳ್ಳೆಯ ದಿನ ಎಂದು ನಾಮಪತ್ರ ಸಲ್ಲಿಸಿದ್ದೆನೆ. ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ಕಾಂಗ್ರೆಸ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದೇನೆ. ಸರಳವಾಗಿ ನಾಮಪತ್ರ ಸಲ್ಲಿಸುವ ಉದ್ದೇಶದಿಂದ ಯಾವ ಕಾರ್ಯಕರ್ತರಿಗೂ ಕರೆ ಕೊಟ್ಟಿಲ್ಲ. ಅದರೂ, ಸ್ವಯಂಪ್ರೇರಿತವಾಗಿ ಸಾವಿರಾರು ಕಾರ್ಯಕರ್ತರು ಬಂದಿದ್ದಾರೆ ಎಂದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶೆಟ್ಟರ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಮಾಜಿ ಸಿಎಂ, ಬಿಜೆಪಿ ಕಟ್ಟಾಳು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ನಿಜಕ್ಕೂ ಖುಷಿಯ ವಿಚಾರ‌ವೆಂದರು. ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ಮೂಲೆಗುಂಪು ಮಾಡಿದ್ರು ಕಣ್ಣೀರು ಹಾಕಿಸಿ, ಅಧಿಕಾರದಿಂದ ಕೆಳಗೆ ಇಳಿಸಿದ್ರು. ಪಕ್ಷಕ್ಕಾಗಿ ದುಡಿದ ನಾಯಕರಿಗೆ ಬಿಜೆಪಿ ಪಕ್ಷದಲ್ಲಿ ಬೆಲೆ ಇಲ್ಲದಂತೆ ಮಾಡಿದ್ದಾರೆ. ಮೋದಿ ಬಿಟ್ಟರೇ, ಬೇರೆ ಯಾರಿಗೂ ಬೆಲೆ ಇಲ್ಲ ಎಂಬಂತೆ ಆಗಿದೆ. ಲಕ್ಷ್ಮಣ್ ಸವದಿ ಡಿಸಿಎಂ ಆಗಿದ್ದವರು. ಅವರಿಗೂ ಸಹ ಟಿಕೆಟ್ ನೀಡಲಿಲ್ಲ ಎಂದರು.

ಹೋಗಿ ಹೋಗಿ ರಮೇಶ್ ಜಾರಕಿಹೊಳಿ ಅಂತವರಿಗೆ ಟಿಕೆಟ್ ಕೋಡ್ತಾರೆ. ಇದನ್ನ ಗಮನಿಸಿದ್ರೇ, ಪಕ್ಷ ದುರಂತದ ಹಾದಿ ಹಿಡಿದಿರೋದು ಗೊತ್ತಾಗುತ್ತೇ. ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸಾಮಾನ್ಯ. ಇಲ್ಲಿಂದನೂ ಹೋಗ್ತಾರೆ. ಅಲ್ಲಿಂದಾನೂ ಬರ್ತಾರೆ. ರಾಜಕೀಯ ತಂತ್ರ ಇರ್ತಾವೆ. ಅದಕ್ಕೆಲ್ಲಾ ನಾವು ಹೆದರೋ ಪ್ರಶ್ನೆಯೇ ಇಲ್ಲ ಎಂದರು.

ಹರತಾಳು ಹಾಲಪ್ಪನವರ ಬಗ್ಗೆ ಮಾತನಾಡಿ, ಮನೆ ಹಾಳು ಮಾಡೋದ್ರಲ್ಲಿ ನಂಬರ್ ಒನ್, ಹಿಂದೆ ಸೊರಬದಲ್ಲಿ ಬಂಗಾರಪ್ಪ ಕುಟುಂಬ ಒಡೆದು, ಮನೆ ಹಾಳು ಮಾಡಿದ್ರು. ಈಗ ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಕುಟುಂಬ ಒಡೆದು, ಮನೆ ಹಾಳು ಮಾಡೋಕೆ ರೆಡಿ ಆಗಿದ್ದಾರೆ. ಮನೆ ಹಾಳು ಮಾಡೋ ರಾಜ್ಯದಲ್ಲಿ ಇರೋದು ಹಾಲಪ್ಪನಿಗೆ ಮಾತ್ರ. ಹಾಲಪ್ಪನ ಬಗ್ಗೆ ನಾನು ಟೀಕೆ ಮಾಡೋದೇ ಬೇಡ. ಅವರ ಭ್ರಷ್ಟಾಚಾರ, ಪಕ್ಷ ಒಡೆದಿದ್ದನ್ನ ಅವರ ಪಕ್ಷದವರೇ ಹೇಳ್ತಿದ್ದಾರೆ. ವಿರೋಧ ಪಕ್ಷವಾಗಿ ನಾವು ಕೂಡ ನಮ್ಮ ಕೆಲಸ ಮಾಡ್ತೇವೆ. ಹೊಸನಗರ, ಸಾಗರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು.

Leave A Reply

Your email address will not be published.

error: Content is protected !!