Karnataka Assembly Election | ಹರತಾಳು ಹಾಲಪ್ಪ ನಾಮಪತ್ರ ಸಲ್ಲಿಕೆ ; ನಮ್ಮ ಮೆರವಣಿಗೆಯೇ ಚುನಾವಣೆಯ ಉತ್ತರ

0 45

ಸಾಗರ: ನಮ್ಮ ಮೆರವಣಿಗೆಯೇ ಚುನಾವಣೆಯ ಉತ್ತರವಾಗಿದೆ ಎಂದು ಸಾಗರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರತಾಳು ಹಾಲಪ್ಪ ತಿಳಿಸಿದರು.

ಅವರು ಇಂದು ನಾಮಪತ್ರ ಸಲ್ಲಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಬಾರಿ ಅಭಿವೃದ್ಧಿಯ ಹೆಸರಿನಲ್ಲಿ ಮತಯಾಚಿಸಿದ್ದೆ. ಡಬ್ಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಅಭಿವೃದ್ಧಿಯಾಗಿದೆ. ಅಭಿವೃದ್ಧಿಯ ಬಗ್ಗೆ ವಿಪಕ್ಷದವರು ಹೌದು ಎನ್ನುತ್ತಾರೆ ಆದರೆ ಚುನಾವಣೆ ಕಾರಣ ವಿರೋಧಿಸುತ್ತಿದ್ದಾರೆ ಎಂದರು.

ಗಣಪತಿ ಕೆರೆ ಸ್ವಚ್ಛ ಮಾಡಲಾಗಿತ್ತು. ಗಣಪತಿ ಕೆರೆ ಕ್ಲೀನ್ ಆಗಿದೆ ಗಣಪತಿ ದೇವಸ್ಥಾನ ಪರಿಸರ ಸರಿಯಿಲ್ಲ. ದೇವಸ್ಥಾನದ ಪರಿಸರವನ್ನ 25 ಕೋಟಿ ರೂ. ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡುತ್ತೇವೆ. ಪ್ರಯಾಣಿಕರಿಗೆ ಆಕರ್ಷಿಸುವಂತೆ ಮಾಡುತ್ತೇವೆ ಎಂದರು.

ಒಂದು ಕಿ.ಮೀ. ವರದಾ ನದಿಯನ್ನ ಸ್ವಚ್ಛ ಮಾಡುತ್ತೇವೆ. ಪಟಗುಪ್ಪ ಸೇತುವೆ ಸೇರಿ 139 ಸೇತುವೆ ಕಟ್ಟಿದ್ದೇವೆ. ಹಾಗಾಗಿ ನಮಗೆ ಬೆಂಬಲಿಸಬೇಕು. ಸಂಸದ ರಾಘವೇಂದ್ರ ಅಭಿವೃದ್ಧಿಪಡಿಸುವ ಸಂಸದರಲ್ಲಿಯೇ ಎರಡನೇ ಸ್ಥಾನದಲ್ಲಿದ್ದಾರೆ. ರಸ್ತೆಗೆ 2500 ಕೋಟಿ ರೂ. ಖರ್ಚಾಗಿದೆ ಸುಶಾನ ತಂದಿದ್ದಾರೆ ಎಂದರು.

2004 ರಿಂದ 2013 ರವರೆಗೆ ವಿಚಿತ್ರವಾಗಿ ತಹಶೀಲ್ದಾರ್ ಕಚೇರಿ ಬಳಿ ಜನ ಚುಡಾಯಿಸುವರು, ಕಿಚಾಯಿಸುವವರು ಮೆರೆಯುತ್ತಿದ್ದರು. ಕಳೆದ ನಾಲ್ಕು ವರ್ಷದಿಂದ ಇವರನ್ನೆಲ್ಲಾ ಹದ್ದುಬಸ್ತಿಗೆ ತರಲಾಗಿದೆ ಇದು ಸುಶಾನವಾಗಿದೆ. ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿ ಓಡಾಡುತ್ತಿದ್ದಾರೆ. ಮಾರಿಜಾತ್ರೆಯಲ್ಲಿ ಯಾವುದೇ ಗಲಾಟೆ ಅಗಲಿಲ್ಲ. 30 ಲಕ್ಷ ಜನ ಜಾತ್ರೆಗೆ ಭಾಗಿಯಾಗುವಂತೆ ಮಾಡಿದ್ದೇವೆ ಎಂದರು.

ಮಲೆನಾಡಿನ ರೈತನಿಗೆ ಕೆಲ ಅಡಚಣೆಯಿದೆ. ಅದಕ್ಕೆ ಸೂಕ್ತಕಾನೂನು ತರುತ್ತೇವೆ ಇದನ್ನ ಪರಿಣಾಮಕಾರಿಯಾಗಿ ಸರಿಪಡಿಸುತ್ತೇವೆ ಇದಕ್ಕೆ ನಮಗೆ ಬೆಂಬಲಿಸಬೇಕೆಂದರು. ಅಸೆಂಬ್ಲಿ ಒಳಗೆ ಹೊರಗೆ ಮತ್ತು ಸಂಸತ್ ನಲ್ಲಿ ಮಾತನಾಡುತ್ತೇವೆ ಎಂದರು.

ಎರಡು ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆದ್ದಿದ್ದರು. ಸುಶಾನ ಬರಲಿಲ್ಲ. ಸೋಷಿಯಲಿಸ್ಟ್ ಎಂದರೆ ಜಾರ್ಜ್ ಫರ್ನಾಂಡಿಸ್ ಅವರು ಬಿಜೆಪಿ ಜೊತೆ ಸರ್ಕಾರ ಮಾಡಿದ್ದರು. ಎ.ಕೆ. ಆಂಟೋನಿ ಅವರ ಮಗ ಬಿಜೆಪಿ ಸೇರಿದ್ದಾರೆ. ರಾಜನಂದಿನಿ ಬಿಜೆಪಿ ಸೇರಿದರೆ ಏನು ತಪ್ಪು ? ಎಂದು ಪ್ರಶ್ನಿಸಿದರು.

ಬಿಎಸ್‌ವೈ ಮತ್ತು ಕಾಗೋಡು ತಿಮ್ಮಪ್ಪ ಬೇರೆ ಬೇರೆ ಪಕ್ಷದವರಾಗಿರಬಹುದು ರೈತರ ಮತ್ತು ಜಿಲ್ಲೆಯ ಸಮಸ್ಯೆ ಬಂದಾಗ ಇಬ್ಬರೂ ಒಂದೇ ಎಂದ ಹಾಲಪ್ಪ, ಯಾರು ಬಿಜೆಪಿಯನ್ನ ಒಪ್ಪಿಕೊಂಡು ಬರುತ್ತಾರೋ ಅವರನ್ನ ಬರಮಾಡಿಕೊಂಡು ತುಪ್ಪ ಮಾಡಿಕೊಳ್ಳೋಣ ತುಪ್ಪ ಯಾವತ್ತು ಹಾಳಾಗಲ್ಲ ಹಾಗಾಗಿ ತುಪ್ಪವನ್ನಾಗಿ ಮಾಡಿಕೊಳ್ಳೊಣವೆಂದರು.

Leave A Reply

Your email address will not be published.

error: Content is protected !!