ಕಸ ವಿಲೇವಾರಿ ಘಟಕವಾಗಿ ಪರಿವರ್ತನೆಗೊಂಡ ಮುಚ್ಚಲ್ಪಟ್ಟಿದ್ದ ಸರ್ಕಾರಿ ಶಾಲಾ ಕಟ್ಟಡ ! ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಇದೆಂತಹ ಪರಿಸ್ಥಿತಿ

0 1,005

ರಿಪ್ಪನ್‌ಪೇಟೆ: ಕಳೆದ ಇಪ್ಪತ್ತು 25 ವರ್ಷಗಳ ಹಿಂದೆ ಬೆನವಳ್ಳಿ ಗ್ರಾಮ ದೂನದ ವಾಸಿ ಪ್ರತಿಷ್ಠಿತ ಕುಟುಂಬದ ಟೀಕಪ್ಪಗೌಡ ಎಂಬುವರ ದೂರದೃಷ್ಠಿಯಿಂದ ಗ್ರಾಮೀಣ ಪ್ರದೇಶದ ಮಕ್ಕಳ ವ್ಯಾಸಂಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶಿವಮೊಗ್ಗ – ಹೊಸನಗರ ಮುಖ್ಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಎರಡು ಎಕರೆ ಸ್ವಂತ ಜಾಗವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ದಾನ ನೀಡಲಾಗಿ ಆ ಜಾಗದಲ್ಲಿ ಸುಸಜ್ಜಿತ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣವಾಗುವುದರೊಂದಿಗೆ ಬಿಸಿಯೂಟದ ಕೊಠಡಿ ಸೇರಿದಂತೆ ಮಕ್ಕಳಿಗೆ ಶೌಚಾಲಯ ಹೀಗೆ ಮೂಲಭೂತ ಸೌಲಭ್ಯಗಳನ್ನು ನೀಡುವುದರೊಂದಿಗೆ ಶಾಲೆ ಆರಂಭಗೊಂಡಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆಯಿಂದಾಗಿ ದೂನದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸಿದ ಪರಿಣಾಮ ಶಾಲೆಯನ್ನು ಬಂದ್ ಮಾಡುವುದು ಅನಿರ್ವಾಯವಾಯಿತು.

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಒಂದೇ ಒಂದು ಹೊಸ ಸರ್ಕಾರಿ ಶಾಲೆಯನ್ನೂ ಆರಂಭಿಸಿದೇ ಸಾವಿರಾರು ಸಂಖ್ಯೆಯಲ್ಲಿ ಖಾಸಗಿ ಶಾಲೆಗಳೂ ನಾಯಿಕೊಡೆಯಂತೆ ತಲೆ ಎತ್ತುತ್ತಿವೆ. ಹಣ ಹೊಂದಿಸಲು ಅಗದವರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವಂತ ವಾತವರಣ ನಿರ್ಮಾಣಗೊಳ್ಳಬೇಕು. ಅದಕ್ಕಾಗಿ ಸಂಸತ್ತು ವಿಧಾನಸಭೆ ಬೇಕಾದಷ್ಟು ಕಾಯ್ದೆಗಳನ್ನು ಅನುಷ್ಠಾನ ಮಾಡಿದರೂ ಕೂಡಾ ಅನುಷ್ಠಾನದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳು ಒಂದೊಂದಾಗಿ ಅವನತಿಯತ್ತ ಸಾಗಿರುತ್ತವೆ ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ಮಜರೆಹಳ್ಳಿ ದೂನ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕಸವಿಲೇವಾರಿ ಘಟಕವನ್ನಾಗಿ ಪರಿವರ್ತನೆಗೊಂಡಿದೆ. ಕಳೆದ 20 ವರ್ಷ ಈ ಶಾಲೆಯಲ್ಲಿ ಅತಿ ಹೆಚ್ಚು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸಿದ್ದಾರೆ. ಶಾಲೆ ಸುಸಜ್ಜಿತವಾಗಿ ಸುತ್ತಲು ಉದ್ಯೋಗ ಖಾತ್ರಿ ಯೋಜನೆಯಡಿ ಕಾಂಪೌಂಡ್ ನಿರ್ಮಾಣ ಮತ್ತು ಸುಸಜ್ಜಿತ ಶಾಲಾ ಕಟ್ಟಡ ಶೌಚಾಲಯ ಸೇರಿದಂತೆ ಬಿಸಿಯೂಟದ ಕೊಠಡಿ ಎಲ್ಲವೂ ಇದ್ದರೂ ಕೂಡಾ ಖಾಸಗಿ ಶಾಲೆಗಳ ಮಾಫಿಯಾ ದೊರೆಗಳ ವಕ್ರದೃಷ್ಠಿಯಿಂದಾಗಿ ಮಕ್ಕಳೇ ಇಲ್ಲದೇ ಶಾಲೆ ಮುಚ್ಚಲ್ಪಟ್ಟಿದೆ. ದೂನ ಗ್ರಾಮದಿಂದ ಸುಮಾರು 40ಕ್ಕೂ ಹೆಚ್ಚಿನ ಮಕ್ಕಳು ರಿಪ್ಪನ್‌ಪೇಟೆಯ ವಿವಿಧ ಖಾಸಗಿ ಶಾಲೆಗೆ ಬರುತ್ತಿದ್ದಾರೆ. ಅವರುಗಳ ಮನೆ ಬಾಗಿಲಿಗೆ ಸ್ಕೂಲ್ ವಾಹನದ ವ್ಯವಸ್ಥೆಯಿಂದಾಗಿ ಪೋಷಕವರ್ಗ ಸಹ ಖಾಸಗಿ ಶಾಲೆಗಳತ್ತ ಮುಖ ಮಾಡಿರುವುದು ವಿಪರ್ಯಾಸವೇ ಸರಿ.

ನಮ್ಮ ತಂದೆಯರಾದ ದೂನ ಟೀಕಪ್ಪಗೌಡರು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ದೊರೆಯಲಿ ಎನ್ನುವ ಮಹದಾಸೆಯಿಂದ ಶಾಲೆಗಾಗಿ ಮಾತ್ರ ಭೂಮಿಯನ್ನು ಕೊಡುಗೆಯಾಗಿ ನೀಡಿರುವುದೇ ಹೊರತು ಅನ್ಯ
ಉದ್ದೇಶಕ್ಕಾಗಿಯಲ್ಲ. ನಮ್ಮ ತಂದೆಯವರ ಮುಂದಾಲೋಚನಾ ಅಭಿಲಾಷೆಗೆ ತಣ್ಣೀರೆರೆಚಬೇಡಿ.
– ಕುಮಾರಸ್ವಾಮಿ, ಶಾಲೆಗೆ ದೇಣಿಗೆ ನೀಡಿದ ಟೀಕಪ್ಪಗೌಡರ ಪುತ್ರ

ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟಿದ ಶಾಲೆಯನ್ನು ಅರಸಾಳು ಗ್ರಾಮ ಪಂಚಾಯ್ತಿ ಕಸವಿಲೇವಾರಿ ಘಟಕವನ್ನಾಗಿಸಿ ಶಾಲೆಗೆ ಕೊನೆಯ ಮೊಳೆ ಹೊಡೆಯಲು ಹೊರಟಿದೆ. ಅರಸಾಳು ಗ್ರಾಮ ಪಂಚಾಯ್ತಿನ ಹಳೆಯ ಕಟ್ಟಡದಲ್ಲಿ ಈಗಾಗಲೇ ಸ್ವಚ್ಚ ಸಂಕೀರ್ಣ ಘಟಕವಿದ್ದರೂ ದೂನ ಗ್ರಾಮದಲ್ಲಿ ವಿದ್ಯಾರ್ಥಿಗಳಿಲ್ಲದೇ ಮುಚ್ಚಿರುವ ಸರ್ಕಾರಿ ಶಾಲೆಯಲ್ಲಿ ಕಸವನ್ನು ಹಾಕುವ ಮೂಲಕ ಭವಿಷ್ಯದ ಸಾವಿರಾರು ಶೈಕ್ಷಣಿಕ ಚಟುವಟಿಕೆಗೆ ತಣ್ಣೀರೆರೆಚುವ ಕೆಲಸಕ್ಕೆ ಕೈಹಾಕಿದ್ದಾರೆಂದು ಸಾರ್ವಜನಿಕರು‌ ಆಕ್ರೋಶಕ್ಕೆ ಕಾರಣವಾಗಿದೆ.

Leave A Reply

Your email address will not be published.

error: Content is protected !!