ಕ್ರೀಡಾಕೂಟ ; ಹೊಸನಗರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0 447

ಹೊಸನಗರ : ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಹೊಸನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮೆರೆದು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ 800 ಮೀಟರ್ ಓಟದಲ್ಲಿ ಪುಷ್ಪ, 1500 ಮೀಟರ್ ಓಟದಲ್ಲಿ ದೀಕ್ಷಿತಾ ಪ್ರಥಮ ಸ್ಥಾನ, ಯಶವಂತ ದ್ವಿತೀಯ ಸ್ಥಾನ, ಡಿಸ್ಕಸ್ ಎಸೆತದಲ್ಲಿ ಶ್ರೇಯಸ್ ಪ್ರಥಮ ಸ್ಥಾನ ಗಳಿಸಿ ಗ್ರಾಮೀಣ ವಿದ್ಯಾರ್ಥಿಗಳು ಪಾಠದಲ್ಲಿ ಮಾತ್ರವಲ್ಲದೆ ಆಟದಲ್ಲೂ ನಾವೇ ಸೈ ಎಂಬುದನ್ನು ಜಿಲ್ಲಾ ಕೇಂದ್ರದಲ್ಲಿ ತೋರಿಸಿಕೊಟ್ಟಿದ್ದಾರೆ.

ಉತ್ತಮ ಪ್ರದರ್ಶನ ನೀಡಿ ವಾಲಿಬಾಲ್ ಪಂದ್ಯದಲ್ಲಿ ಪ್ರಭಂಜನ್ ಹಾಗೂ ನಿಸರ್ಗ ಕೆ ಆರ್ ಬಾಲಕಿಯರ ವಿಭಾಗದ ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿ ಈ ಇಬ್ಬರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರು ವಿಭಾಗದ ಕಬ್ಬಡಿ ಪಂದ್ಯಾಟದಲ್ಲಿ ಭೂಮಿಕಾ ಸಿಂಚನ ಬಿ.ಹೆಚ್, ಮಾನಸ, ಸಿಂಧು ಹಾಗೂ ಬಾಲಕರ ವಿಭಾಗದ ಕಬ್ಬಡಿ ಪಂದ್ಯಾಟದಲ್ಲಿ ಸಲ್ಮಾನ್ ತನ್ವೀರ್ ಕೆ.ಆರ್, ವಿಜಯ, ಶ್ರೀಶಾಂತ್, ಸಂಗಮ್, ಅವಿನಾಶ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ರಾಜ್ಯ ಮಟ್ಟದಲ್ಲೂ ತಮ್ಮ ಪ್ರತಿಭೆಯನ್ನು ಪ್ರಕಟಿಸಲಿದ್ದಾರೆ

ಈ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಸಕ ಬೇಳೂರು ಗೋಪಾಲಕೃಷ್ಣ, ಕಾಲೇಜ್ ಅಭಿವೃದ್ದಿ ಸಮಿತಿಯವರು ಬೋಧನಾ ವೃಂದದವರು ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!