ಜನರ ನಿದ್ದೆಗೆಡಿಸಿದ್ದ ಚಿರತೆ ಅಂತೂ ಬೋನಿಗೆ

0 388

ಭದ್ರಾವತಿ : ಸುತ್ತಮುತ್ತಲ ಹಳ್ಳಿಗಳ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು (Leopard) ಅರಣ್ಯಾಧಿಕಾರಿಗಳು (Forest Department) ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.


ಹಲವು ದಿನಗಳಿಂದ ಕಾರೇಹಳ್ಳಿ ಸುತ್ತಮುತ್ತ ಈ ಚಿರತೆ ಜನರಲ್ಲಿ ಭಯ ಹುಟ್ಟಿಸಿತ್ತು. ಅಲ್ಲದೆ ಗ್ರಾಮಗಳ ರಾಸುಗಳನ್ನು ಕೊಂದು ತಿಂದಿತ್ತು. ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆಹಿಡಿಯಲು ಹರಸಾಹಸ ಮಾಡಿದ್ದರು.

ಜನರಿಗೆ ಕಾಟ ಕೊಡುತ್ತಿದ್ದ ಚಿರತೆ ಕೊನೆಗೂ ಭದ್ರಾವತಿ ಸಮೀಪದ ಕಾರೇಹಳ್ಳಿಯಲ್ಲಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.

Leave A Reply

Your email address will not be published.

error: Content is protected !!