ನಿಧನವಾರ್ತೆ ; ಜಡ್ಡುಗದ್ದೆ ಸಾವಿತ್ರಮ್ಮ ಇನ್ನಿಲ್ಲ !

0 3,169

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಪಂ ವ್ಯಾಪ್ತಿಯ ಜಡ್ಡುಗದ್ದೆ ನಿವಾಸಿ ಸಾವಿತ್ರಮ್ಮ ಕೋಂ ಚಿನ್ನನಾಯ್ಕ (90) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇಂದು ಬೆಳಗಿನಜಾವ ನಿಧನ ಹೊಂದಿದರು.

ಮೃತರು ಐವರು ಪುತ್ರಿಯರು, ಓರ್ವ ಪುತ್ರ, ಮೊಮ್ಮಕ್ಕಳು, ಅಳಿಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಅವರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಂತಾಪ :
ಸಾವಿತ್ರಮ್ಮನವರ ನಿಧನಕ್ಕೆ ಮಾಜಿ ಸಚಿವ‌ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ತಾಪಂ ಮಾಜಿ ಅಧ್ಯಕ್ಷೆ ನವಮಣಿ ರವಿಕುಮಾರ್, ಶೇಡ್ಗಾರ್ ಗ್ರಾಪಂ ಮಾಜಿ ಸದಸ್ಯೆ ಉಷಾ ಕರುಣಾಕರ್ ಸೇರಿದಂತೆ ಅನೇಕರು ತೀವ್ರ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರಿದ್ದಾರೆ‌.

Leave A Reply

Your email address will not be published.

error: Content is protected !!