ಬಾಲ್ಯವಿವಾಹ ಮುಕ್ತ ಸಮಾಜವನ್ನು ನಿರ್ಮಿಸುವುದಕ್ಕೆ ದೇಶದ ಪ್ರತಿಯೊಬ್ಬರು ಬದ್ದರಾಗಿರಬೇಕು ; ವಾಲೆಮನೆ ಶಿವಕುಮಾರ್

0 172

ಹೊಸನಗರ: ಭಾರತದ ಪ್ರಜೆಯಾದ ನಾವು ಬಾಲ್ಯವಿವಾಹದಿಂದ ಹೆಣ್ಣು ಮಕ್ಕಳ ಶಿಕ್ಷಣ ಕುರಿತಾಗಿ ಅವರ ಹಕ್ಕುಗಳಾದ ಬದುಕುವ ಹಕ್ಕು , ರಕ್ಷಣೆಯ ಹಕ್ಕು , ತಿಳಿದಿರುವುದರಿಂದ ಬಾಲ್ಯವಿವಾಹ ಮುಕ್ತ ಸಮಾಜವನ್ನು ನಿರ್ಮಿಸುವುದಕ್ಕೆ ಬದ್ದರಾಗಿರಬೇಕೆಂದು ಬಾರ್ ಅಸೋಸಿಯೇಶನ್ ಅಧ್ಯಕ್ಷ ವಾಲೆಮನೆ ಶಿವಕುಮಾರ್‌ರವರು ಹೇಳಿದರು.

ಪಟ್ಟಣದ ಶಿಶು ಅಭಿವೃದ್ಧಿ ಯೋಜನೆಯ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಹೆಣ್ಣು ಗಂಡು ಮಕ್ಕಳು ನನ್ನ ವೈಯಕ್ತಿಕ ನೆಲೆಯಿಂದ ಮತ್ತು ಸಮಾಜದಲ್ಲಿನ ನನ್ನ ಸ್ಥಾನಮಾನದ ನೆಲೆಯಿಂದ ನನ್ನ ಕುಟುಂಬದಲ್ಲಿ, ಬಂಧು-ಬಳಗದಲ್ಲಿ ಸಮುದಾಯದಲ್ಲಿ ಹಾಗೂ ಸಮಾಜದಲ್ಲಿ ನಾನು ಬಾಲ್ಯ ವಿವಾಹಗಳನ್ನು ವಿರೋಧಿಸುತ್ತೇನೆ. 18 ವರ್ಷದೊಳಗಿನ ಹೆಣು ಮಕ್ಕಳ ಮತ್ತು 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ನೆಡೆಸುವ ಸಾಧ್ಯತೆ ಕಂಡುಬಂದಲ್ಲಿ ಅದನ್ನು ತಡೆಯುತ್ತೇನೆೆ ನಾನು ಹುಟ್ಟಿರುವುದು ಭಾರತದಲ್ಲಿ ಬಾರತ ದೇಶದ ಕಾನೂನಿನ ಚೌಕಟ್ಟಿನಲ್ಲಿ ಬದುಕುತ್ತೇವೆ ಎಂದು ತಿಳಿದಿದ್ದರೇ ಎಲ್ಲಯು ಬಾಲ್ಯ ವಿವಾಹದಂತೆ ಕೆಟ್ಟ ಸಂಸ್ಕೃತಿಯನ್ನು ಭಾರತ ದೇಶದಿಂದ ತೊಳೆದು ಹಾಕಬಹುದು ಎಂದರು.


ಶಿಶು ಅಭಿವೃದ್ಧಿ ಇಲಾಖೆಯ ರಾಜುರವರು ಈ ಸಂದರ್ಭದಲ್ಲಿ ಮಾತನಾಡಿ, ಮಹಿಳೆಯರಿಗೆ 18 ವರ್ಷ ಹಾಗೂ ಪುರುಷರಿಗೆ 21 ವರ್ಷದ ಒಳಗೆ ವಿವಾಹ ಮಾಡಿದರೆ ಅದು ಕಾನೂನಿನ ಅಡಿಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯಾಗಿದ್ದು ತಮ್ಮ ಗ್ರಾಮ, ಊರು ತಾಲ್ಲೂಕು ರಾಜ್ಯದಲ್ಲಿ ಎಲ್ಲೇ ಮದುವೆ ನಡೆದರೂ ತಕ್ಷಣ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಾಗಿ, ಪೊಲೀಸರಿಗೆ, ಜಿಲ್ಲಾ ನ್ಯಾಯಾಧೀಶರಿಗೆ ಅಥವಾ 112ಗೆ ಮಾಹಿತಿ ನೀಡಿದರೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಪ್ರಕಾರ ಬಾಲ್ಯ ವಿವಾಹವಾಗಿರುವುದರಿಂದ ತಕ್ಷಣ ಕಾನೂನಿನ ಅಡಿಯಲ್ಲಿ ಮಕ್ಕಳ ಪೋಷಕರನ್ನು ವಶಕ್ಕೆ ಪಡೆಯಲಿದ್ದು ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆ ಪ್ರತಿಯೊಬ್ಬರು ಕಾನೂನು ಪಾಲಿಸಬೇಕೆಂದರು.


ಈ ಕಾರ್ಯಕ್ರಮ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರಾರ್ಥನೆ ನಡೆದಿದ್ದು ಮಹಿಳಾ ಮೇಲ್ವಿಚಾರಕಿ ವಿಜಯ ಎಂ ರವರು ಸ್ವಾಗತಿಸಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಶಿರೇಖಾರವರು ವಹಿಸಿ ಮಾತನಾಡಿದರು.


ಪ್ರಾಸ್ತವಿಕವಾಗಿ ಹಿರಿಯ ಮಹಿಳಾ ಮೇಲ್ವಿಚಾರಕಿ ವೀರಮ್ಮರವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಚಂದ್ರಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕರಿಬಸಮ್ಮ, ಪ್ರೇಮಾ, ಕ್ಷೇತ್ರ ಸಮಾನ್ವಯಾಧಿಕಾರಿ ರಂಗನಾಥ್, ಚಂದ್ರಕಲಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!