ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಿ ಸಂಸ್ಕಾರ, ಸಂಸ್ಕೃತಿ ಕಲಿಸಿ ; ಜೋಗತಿ ಮಂಜಮ್ಮ

0 200

ಹೊಸನಗರ: ಇಂದಿನ ಮಕ್ಕಳು ಸಂಸ್ಕಾರ ಸಂಸ್ಕೃತಿಯನ್ನು ಮರೆತು ಮೊಬೈಲ್ ನೋಡುವುದರಲ್ಲಿ ಮಗ್ನರಾಗಿರುತ್ತಾರೆ ತಂದೆ-ತಾಯಿಯರು ಮಕ್ಕಳಿಂದ ಮೊಬೈಲ್ ಕಸಿದು ಇಂದಿನ ಸಂಸ್ಕಾರ-ಸಂಸ್ಕೃತಿ ಕಲಿಸಿ ಎಂದು ಪದ್ಮಶ್ರೀ ಹಾಗೂ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವ ಜೋಗತಿ ಮಂಜಮ್ಮ ಹೇಳಿದರು.


ಪಟ್ಟಣದ ಕುವೆಂಪು ವಿದ್ಯಾಶಾಲೆಯ ಆವರಣದಲ್ಲಿ ಜಿಲ್ಲಾ ಮಟ್ಟದ 6ನೇ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಯ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಬಹಳ ಮುಖ್ಯವಾಗಿರುತ್ತದೆ. ಅದನ್ನು ಇಂದಿನ ತಂದೆ-ತಾಯಿಯವರು ಕಲಿಸುತ್ತಿಲ್ಲ. ಮಗು ಹುಟ್ಟಿದ ತಕ್ಷಣದಿಂದ ಮೊಬೈಲ್ ನೀಡುತ್ತಿದ್ದಾರೆ ಇದರಿಂದ ಮುಂದಿನ ದಿನದಲ್ಲಿ ಪೋಷಕರಿಗೆ ತೊಂದರೆಯಾಗಲಿದೆ ಮಕ್ಕಳಿಗೆ ಪಠ್ಯ ಪುಸ್ತಕದ ಜೊತೆಗೆ ರಾಮಾಯಣ, ಮಹಾಭಾರತ, ಬೈಬಲ್, ಕುರಾನ್‌ನಂಥಹ ಪುಸ್ತಕಗಳು ಶರಣರು ಬರೆದಿರುವ ಪುಸ್ತಕಗಳನ್ನು ಓದುವುದು ಮಕ್ಕಳ ಮನಸ್ಸನ್ನು ಸಾಹಿತ್ಯದ ಕಡೆ ಒಲವು ತೋರಿಸಿದರೆ ಮಾತ್ರ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಲು ಸಾಧ್ಯ ಎಂದರು.


ಕನ್ನಡ ಭಾಷೆ ಕಲಿಸಿ ಕನ್ನಡ ಬಾಷೆ ಉಳಿಸಿ :
ಕರ್ನಾಟಕದ ಮಕ್ಕಳಿಗೆ ಕನ್ನಡ ಕಡ್ಡಾಯವಾಗಿ ಕಲಿಸಬೇಕು. ಪ್ರತಿಯೊಬ್ಬ ತಂದೆ-ತಾಯಿಯವರು ಮಕ್ಕಳಿಗೆ ಕನ್ನಡ ಕಲಿಸುವುದರಿಂದ ಕನ್ನಡ ಭಾಷೆಯ ಬಗ್ಗೆ ಹಿಡಿತವಿರುತ್ತದೆ‌. 10ನೇ ತರಗತಿಯ ನಂತರ ಇತರೆ ಭಾಷೆಗಳ ಬಗ್ಗೆ ಒಲವು ತೋರಿಸಿ ಏಕೆಂದರೆ ಮುಂದಿನ ಜೀವನಕ್ಕೆ ಅನುಕೂಲವಾಗುತ್ತದೆ. ಒಂದು ಬಾಳೆ ಎಲೆಯಲ್ಲಿ ಊಟ ಮಾಡುವಾಗ ಅನ್ನ-ಸಾರು ಪಾಯಸ, ಮಜ್ಜಿಗೆಯನ್ನು ಕನ್ನಡಕ್ಕೆ ಹೋಲಿಸಿ ಉಪ್ಪಿನಕಾಯಿ ಉಪ್ಪು, ಪಲ್ಯೆಗಳು ಇತರೆ ಭಾಷೆಗಳಿಗೆ ಹೋಲಿಸಿ ಊಟ ಬದುಕಲುಬೇಕು, ಸೈಡ್ ಪಲ್ಯೆಗಳು ರುಚಿಗಾಗಿ ಇತರೆ ಭಾಷೆ ಬಳಸಿ ಎಂದರು.


ವಿದ್ಯೆ ವಿನಯತೆ ಹಾಗೂ ಗುರುಭಕ್ತಿ ಇದ್ದಲ್ಲಿ ಪ್ರತಿಯೊಬ್ಬರು ಯಶಸ್ಸು ಸಾಧಿಸಲು ಸಾಧ್ಯ:
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ವಿದ್ಯೆ ಕಲಿಯುವ ಗುಣ ಕಲಿಸುವ ಗುರುಗಳ ಬಗ್ಗೆ ಭಕ್ತಿ ಮತ್ತು ವಿನಯತೆ ಇದ್ದಲ್ಲಿ ಪ್ರತಿಯೊಬ್ಬರು ಯಶಸ್ಸು ಕಾಣಲು ಸಾಧ್ಯ. ಶರಣರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕು ಆಗ ಮಾತ್ರ ಇಂಥಹ ಕಾರ್ಯಕ್ರಮ ನಡೆಸಲು ಸಾಧ್ಯ ಎಂದು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ಹೇಳಿದರು.


ಈ 6ನೇ ಶರಣ ಸಾಹಿತ್ಯ ಸಮ್ಮೆಳನ ನಡೆಸಲು ಶ್ರಮಿಸಿರುವ ಜಿಲ್ಲಾ ಸಂಚಾಲಕ ಗಂಗಾಧರಯ್ಯನವರು ಶ್ರಮವಹಿಸಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಂಥಹ ಕಾರ್ಯಕ್ರಮಗಳಿಗೆ ಶರಣರು ಸದಸ್ಯರು ಹಾಗೂ ಸಾರ್ವಜನಿಕರು ಆಗಮಿಸದಿರುವುದಕ್ಕೆ ಬೇಸರ ತಂದಿದೆ ಎಂದು ಈ ಸಮಾರಂಭದ ಕಾರ್ಯಾಧ್ಯಕ್ಷ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಮೌಳಿಯವರು ಹೇಳಿದರು.


ಈ ಕಾರ್ಯಕ್ರಮದಲ್ಲಿ ಆನಂದಪುರ ಬೆಕ್ಕಿನಮಕ್ಕಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ|| ಸೊನಲೆ ಶ್ರೀನಿವಾಸ್‌ರವರು ವಹಿಸಿ ಸಾಹಿತ್ಯದ ಬಗ್ಗೆ ಮಾತನಾಡಿದರು.


ಹೊಸನಗರ ಗಣಪತಿ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷರಾದ ಅಂಬ್ರಯ್ಯಮಠ ರವರನ್ನು ಮೆರವಣಿಗೆಯ ಮೂಲಕ ಸಮಾರಂಭಕ್ಕೆ ಕರೆ ತರಲಾಯಿತು.
ಈ ಸಮಾರಂಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹಾರುದ್ರ, ಎನ್.ಆರ್. ದೇವಾನಂದ್, ಶ್ರಿಪತಿರಾವ್, ಗಂಗಾಧರಯ್ಯ, ಚನ್ನಬಸಪ್ಪಗೌಡ, ದುಮ್ಮ ರೇವಣ್ಣಪ್ಪ ಗೌಡ, ವಿನಯ್ ಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!