ಮನೆಗೆ ನುಗ್ಗಿ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪುಡಾರಿ ಗ್ಯಾಂಗ್ !

0 1,768

ಹೊಸನಗರ : ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನ ಮೇಲೆ ಪುಡಾರಿ ಗ್ಯಾಂಗ್ ಒಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ.

ತೀರ್ಥಹಳ್ಳಿಯಲ್ಲಿ ಐಟಿಐ ವ್ಯಾಸಂಗ ಮಾಡುತ್ತಿರುವ ಯಡೂರು ಮೂಲದ ಹರ್ಷ ಎಂಬ ವಿದ್ಯಾರ್ಥಿಯ ಮೇಲೆ ತೀರ್ಥಹಳ್ಳಿ ಮತ್ತು ಆಗುಂಬೆ ಮೂಲದ ಯುವಕರು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಶನಿವಾರ ಸಂಜೆ 4:30ರ ಸಮಯದಲ್ಲಿ ಯಡೂರು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ರಾಘವೇಂದ್ರ ಭಟ್ಟರವರ ಮನೆಯಲ್ಲಿ ಅಡಿಕೆ ಸುಳಿಯುತ್ತಿದ್ದ ಹರ್ಷ ಎಂಬಾತನ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದಾರೆ.

ಈ ವೇಳೆ ಮಹಿಳೆಯರು, ಮಕ್ಕಳು ಕಿರುಚಿಕೊಂಡಿದ್ದು ತಕ್ಷಣ ಅಕ್ಕ-ಪಕ್ಕದ ಮನೆಯವರು ಬರುತ್ತಿದ್ದಂತೆ ಆರೋಪಿಗಳು ಬೈಕಿನಲ್ಲಿ (KA14EG2826) ಪರಾರಿಯಾಗಿದ್ದಾರೆ.

ತಕ್ಷಣ ಸ್ಥಳೀಯರು ಗಾಯಾಳು ವಿದ್ಯಾರ್ಥಿಯನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು ಆರೋಪಿಗಳು ನಿತೀಶ್, ಮನೋಜ್, ರಾಜೀವ್ ಎಂದು ತಿಳಿದುಬಂದಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave A Reply

Your email address will not be published.

error: Content is protected !!