ಮನೆ ಮುಂದೆ ಸ್ವಚ್ಚವಾಗಿದ್ದರೆ ಊರೇ ಸ್ವಚ್ಛವಾಗಿರುತ್ತದೆ ; ನ್ಯಾಯಾಧೀಶ ರವಿಕುಮಾರ್ ಕೆ

0 71


ಹೊಸನಗರ: ಸ್ವಚ್ಚತೆಯ ಬಗ್ಗೆ ಮುಂದಿನ ಹಿಂದಿನ ಮನೆಯವರ ಬಗ್ಗೆ ಮಾತನಾಡುವುದನ್ನು ಬಿಟ್ಟು ತಮ್ಮ ಸ್ವಂತ ಮನೆಯ ಸುತ್ತ ಸ್ವಚ್ಛ ಮಾಡಿಕೊಂಡರೆ ಇಡೀ ಊರನ್ನೇ ಸ್ವಚ್ಛವಾಗಿಡಬಹುದು ಎಂದು ಹೊಸನಗರದ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ರವಿಕುಮಾರ್ ಕೆ. ಹೇಳಿದರು.


ಅವರು ಹೊಸನಗರದ ನ್ಯಾಯಾಲಯದ ಸುತ್ತ ಬೆಳೆದಿರುವ ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡುತ್ತಿರಲಿಲ್ಲ ತಮ್ಮ ಮನೆಯ ಸುತ್ತ-ಮುತ್ತ ಎಷ್ಟೇ ಕಸ ಕಡ್ಡಿಗಳು ಬಿದ್ದಿದ್ದರೂ ಸ್ವಚ್ಛತೆಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಊರು ಬೆಳೆದಂತೆ ಮನೆಗಳು ಹೆಚ್ಚಾಗತೊಡಗಿದೆ ಜನಸಂಖ್ಯೆಯು ಹೆಚ್ಚುತ್ತಿದ್ದು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಸ್ವಚ್ಛತೆ ಮಾಡಿಕೊಳ್ಳದಿದ್ದರೇ ಕಾಯಿಲೆಗೆ ನಾವೇ ಆಹ್ವಾನ ನೀಡಿದ್ದಂತಾಗುತ್ತದೆ ಕಾಯಿಲೆ ಪ್ರಮಾಣವೂ ಜಾಸ್ತಿಯಾಗುವುದರಿಂದ ಮನೆಯ ಸುತ್ತ-ಮುತ್ತ ಸ್ವಚ್ಛತೆಗೆ ಪ್ರಥಮ ಆಧ್ಯತೆ ನೀಡಿ ಎಂದರು.


ಅಕ್ಕ ಪಕ್ಕದ ಮನೆಯವರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ:
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಸಂತೋಷ್ ಎಂ.ಎಸ್ ಕೋರ್ಟ್ ಸುತ್ತ-ಮುತ್ತ ಸ್ವಚ್ಛಗೊಳಿಸಿ ಮಾತನಾಡಿ, ತಮ್ಮ ಮನೆಯ ಸುತ್ತ-ಮುತ್ತ ಸ್ವಚ್ಛ ಮಾಡಿಕೊಂಡು ಜೀವನ ಸಾಗಿಸಬೇಕು ಹಾಗೂ ನಿಮ್ಮ ಮನೆಯ ಅಕ್ಕ ಪಕ್ಕದವರಿಗೂ ಸ್ವಚ್ಛ ಮಾಡಿಕೊಳ್ಳುವ ಸಂದೇಶವನ್ನು ನೀಡಬೇಕು ಇಲ್ಲವಾದರೇ ತಮ್ಮ ಆರೋಗ್ಯ ಹಾಳಾಗುವುದರ ಜೊತೆಗೆ ಅಕ್ಕ ಪಕ್ಕದಲ್ಲಿ ವಾಸಿಸುವ ಜನರ ಕುಟುಂಬಗಳ ಆರೋಗ್ಯವೂ ಹಾಳಾಗುತ್ತದೆ ನೀವು ಕಾಯಿಲೆಗೆ ತುತ್ತಾಗುತ್ತೀರಿ ಅಕ್ಕ ಪಕ್ಕದ ಮನೆಯವರು ಸ್ವಚ್ಛ ಮಾಡಿಕೊಳ್ಳದಿದ್ದರೆ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿಗಳ ನಿಮ್ಮ ಸುತ್ತ ಇರುವ ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿಯವರ ಗಮನಕ್ಕೆ ತನ್ನಿ ಒಟ್ಟಾರೇ ಪರಿಸರ ಸ್ವಚ್ಛ ಮಾಡಿಟ್ಟು ಪ್ರಯತ್ನಿಸಿ ಎಂದರು.


ಈ ಸ್ವಚ್ಚತ ಅಭಿಯಾನದಲ್ಲಿ ಹೊಸನಗರದ ತಹಶೀಲ್ದಾರ್ ರಾಕೇಶ್ ಫ್ರಾಸ್ಸಿಸ್ ಬಿಟ್ರೋ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮಾಶಂಕರ್, ಆರೋಗ್ಯಾಧಿಕಾರಿ ಪ್ರಶಾಂತ್, ಸಹಾಯಕ ಸರ್ಕಾರಿ ಅಭಿಯೋಜನಕರಾದ ರವಿ, ವಕೀಲರ ಸಂಘದ ಅಧ್ಯಕ್ಷರಾದ ವಾಲೆಮನೆ ಶಿವಕುಮಾರ್, ತಾಲ್ಲೂಕು ಕಛೇರಿಯ ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ವಕೀಲರ ಸಂಘದ ಎಲ್ಲ ಸದಸ್ಯರು ನ್ಯಾಯಾಲಯದ ಎಲ್ಲ ಸಿಬ್ಬಂದಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!