ಮಳೆಗಾಗಿ ಕಂತೆ ಸಿದ್ದೇಶ್ವರ ಸ್ವಾಮಿಗೆ ಜಲಾಭಿಷೇಕ ಗ್ರಾಮದ ಭಕ್ತರಿಂದ ಪರಾವು
ರಿಪ್ಪನ್‌ಪೇಟೆ: ಮಳೆಗಾಗಿ ಪ್ರಾರ್ಥಿಸಿ ಬೈರಾಪುರ ಕಂತೆ ಸಿದ್ದೇಶ್ವರ ಸ್ವಾಮಿಗೆ ಜಲಾಭಿಷೇಕ ರುದ್ರಾಭಿಷೇಕ ವಿಶೇಷ ಪೂಜಾ ಕೈಂಕರ್ಯ ಜರುಗಿತು.
ಕಳೆದ ಒಂದು ತಿಂಗಳಿಗೂ ಅಧಿಕವಾಗಿ ಮಳೆ ಬಾರದೇ ರೈತ ಸಮೂಹ ಭತ್ತ ಮತ್ತು ಶುಂಠಿ ಆಡಿಕೆ ಜೋಳ ಸೇರಿದಂತೆ ಇನ್ನಿತರ ಬೆಳೆಗಳು ಒಣಗುವಂತಾಗಿದ್ದು ದಿಕ್ಕು ತೋಚದೆ ಹೈರಾಣಾಗಿದ್ದ ರೈತರು ಇಂದು ಸಮೀಪದ ಕಂತೆ ಸಿದ್ದೇಶ್ವರನಿಗೆ 101 ಕೊಡಪಾನಗಳ ಜಲಾಭಿಷೇಕ ಮತ್ತು ರುದ್ರಾಭಿಷೇಕ ಪೂಜೆ ಅಲಂಕಾರ ಪೂಜೆ ನೆರವೇರಿಸಿದರು.
ದೇವಸ್ಥಾನದ ಅರ್ಚಕ ಸ್ವಾಮಿ ಬೈರಾಪುರ, ದೇವಸ್ಥಾನಗಳ ಸಮಿತಿ ಅಧ್ಯಕ್ಷ ಡಿ.ಎಸ್.ಕರ್ಣ, ಕಿರಣ್, ಡಿ.ಈ.ಮಧುಸೂದನ್, ಮುಡುಬ, ಪಾಲಾಕ್ಷ, ಷಣ್ಮುಖ ಬೈರಾಪುರ, ಟೀಕೇಶಪ್ಪ ಬಿ.ಹೆಚ್.ಮಂಜಪ್ಪ, ರವೀಂದ್ರ ಕೆರೆಹಳ್ಳಿ, ಅಡಿಕಟ್ಟು ಸ್ವಾಮಿ, ಕೇಶವ ಟೈಲರ್ ದೊಡ್ಡಿನಕೊಪ್ಪ ಡಿ.ಸಿ.ಮುರುಗೇಶಪ್ಪಗೌಡ, ಸುಶೀಲಮ್ಮ, ಮೇನುಕಮ್ಮ, ಶಾರದಮ್ಮ ಮುಡುಬ, ಎಂ.ಕೆ.ನಾಗಭೂಷಣ, ಭೀಮಪ್ಪ ದೂನ, ರಾಜು ಭಂಡಾರಿ ಬೈರಾಪುರ, ತಿಮ್ಮಪ್ಪ, ಮುರುಳಿ ಕೆರೆಹಳ್ಳಿ, ದಾಕ್ಷಾಯಣಿಮ್ಮ, ತಮ್ಮಣ್ಣಿ, ಎಂ.ವೈ.ನಾಗರಾಜ್ ಇನ್ನಿತರ ಹಲವರು ಪಾಲ್ಗೊಂಡಿದರು.
ಬೈರಾಪುರ, ಬೆನವಳ್ಳಿ, ಮುಡುಬ, ದೊಡ್ಡಿನಕೊಪ್ಪ, ರಿಪ್ಪನ್‌ಪೇಟೆ, ಕೆದಲುಗುಡ್ಡೆ, ಕೆಂಚನಾಲ, ಕೆರೆಹಳ್ಳಿ, ಅಡಿಕಟ್ಟು, ದೂನ, ಹೊಸಮನೆ, ಆಲವಳ್ಳಿ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.