ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತರಾಗಬಾರದು ; ಶಾಸಕ ಬೇಳೂರು ಗೋಪಾಲಕೃಷ್ಣ

0 665

ಹೊಸನಗರ: ಮಹಿಳೆಯರು (Women’s) ಸ್ವಾವಲಂಬಿಯಾಗಿ ಬದುಕಬೇಕು. ಕೇವಲ ಮನೆಯಲ್ಲಿ ಅಡುಗೆ (Cooking) ಕೆಲಸಕ್ಕೆ ಸೀಮಿತ ಆಗಬಾರದು. ಸಮಾನತೆಯ ಆಶಯಗಳು ಈ ಮೂಲಕ ಈಡೇರಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopalakrishna) ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸೋಮವಾರ ಏರ್ಪಡಿಸಿದ್ದ ಉದ್ಯಮ ಶೀ ಲತಾ ಜಾಗೃತಿ ಶಿಬಿರದಲ್ಲಿ ಫಲಾನುಭವಿಗಳಿಗೆ ಸುಧಾರಿತ ಉಪಕರಣಗಳ ವಿತರಣೆ ನೀಡಿ ಮಾತನಾಡಿದರು.
ಅಸಂಘಟಿತ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟಕರ. ಇದನ್ನು ಮನಗಂಡು ರಾಜ್ಯ ಸರ್ಕಾರ ಬದುಕು ಕಟ್ಟಿಕೊಳ್ಳಲು ಸಹಾಯವಾಗಲಿ ಎನ್ನುವ ಉದ್ದೇಶದಿಂದ ಇಂತಹವರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಮೇಲು-ಕೀಳು ಎಂಬ ಭಾವನೆ ಬೇಡ. ನ್ಯಾಯಯುತ ದಾರಿಯಲ್ಲಿ ಯಾವುದೇ ಉದ್ಯೋಗ ಕೈಗೊಂಡರೂ ಅದಕ್ಕೆ ಸಮಾನಗೌರವ ವಿದೆ. ವಿಮಾ ಸೌಲಭ್ಯಗಳನ್ನು ಪಡೆಯದಿದ್ದಲ್ಲಿ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗಬಹುದು. ಈ ಬಗ್ಗೆ ಮುಂಜಾಗ್ರತೆ ಅಗತ್ಯ ಎಂದರು.

ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಶ್ಮಿ, ತಾಪಂ ಇಓ ನರೇಂದ್ರಕುಮಾರ್, ವಿಸ್ತರಣಾಧಿಕಾರಿ ನಾಗರಾಜ್, ಪ್ರಮುಖರಾದ ಲೀಲಾಶಂಕರ್, ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್, ಪಟ್ಟಣ ಪಂಚಾಯತಿ ನಾಮ ನಿರ್ದೇಶಕ ಗುರುರಾಜ್, ನೇತ್ರಾ ಸುಬ್ರಾಯಭಟ್, ಸುಬ್ರಮಣ್ಯ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!