ಮಾಸ್ಕ್ ಕೇಸ್‌ಗಾಗಿ ಕೋರ್ಟ್‌ಗೆ ಸೈಕಲ್‌ನಲ್ಲೇ 26 ಕಿ.ಮೀ ದೂರ ಕ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ರಿಪ್ಪನ್‌ಪೇಟೆ ಕೃಷ್ಣಪ್ಪ

0 6,261


ಹೊಸನಗರ: ಸಾಮಾಜಿಕ ಕಾರ್ಯಕರ್ತರೆಂದು ಗುರುತಿಸಿಕೊಂಡಿರುವ ರಿಪ್ಪನ್‌ಪೇಟೆ ಟಿ.ಆರ್. ಕೃಷ್ಣಪ್ಪ ಸುಮಾರು ಮೂರು ವರ್ಷದ ಹಿಂದೆ ಕೊರೊನಾ ಸಂದರ್ಭದಲ್ಲಿ ಫೇಸ್ ಮಾಸ್ಕ್ ಹಾಕಿಲ್ಲವೆಂದು ಪೊಲೀಸ್ ಇಲಾಖೆ ಕೇಸ್ ದಾಖಲಿಸಿದ್ದು ಈ ಹಿನ್ನೆಲೆಯಲ್ಲಿ 26 ಕಿ.ಮಿ ದೂರದ ರಿಪ್ಪನ್‌ಪೇಟೆಯಿಂದ ಹೊಸನಗರ ನ್ಯಾಯಾಲಯಕ್ಕೆ ಆಗಮಿಸುತ್ತಿರುವ ಕೃಷ್ಣಪ್ಪ ನಾನು ಬಲಿಷ್ಠ ಆರೋಗ್ಯವಂತನಾಗಿದ್ದೇನೆ ಎಂಬ ಸಂದೇಶ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಕೊಡುತ್ತಿದ್ದಾರೆ.


ಕೃಷ್ಣಪ್ಪನವರು ಪತ್ರಕರ್ತರೊಂದಿಗೆ ಮಾತನಾಡಿ, 40 ವರ್ಷಗಳ ಹಿಂದೆ ಒಂದು ಪ್ರಕರಣದಲ್ಲಿ ಎನ್.ಎಲ್ ಪಾಟೇಲ್ ಎಂಬ ನ್ಯಾಯಾಧೀಶರನ್ನೇ ಅಪಹರಿಸಿ ಬಲೆಬೀಸಿ ಅಮಾಯಕರಂತೆ ಬೇಡಿ ಹಾಕಿ ಗೌಪ್ಯವಾಗಿ ಕರೆದುಕೊಂಡು ಹೋದ ಘಟನೆ ನೆನಪಿಸಿದ್ದು ದೇಶದ ನ್ಯಾಯಾಧೀಶರಿಗೆ ನ್ಯಾಯ ನೀಡುವ ದೇವತೆಗೆ ತೊಂದರೆಕೊಟ್ಟ ಸರ್ಕಾರ ನಮ್ಮ ದೇಶದಲ್ಲಿದೆ ಎಂದರು.


ದೇಶದಲ್ಲಿ ಕೊರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ ಜಿಲ್ಲಾ ಸಾಂಕ್ರಮಿಕ ರೋಗ ಕಣ್ಗಾವಲು ಘಟಕ ನೀವು ಆರೋಗ್ಯವಾಗಿದ್ದೀರೆಂದು ನಿಮಗೆ ತಿಳಿದಿದ್ದರೆ ನೀವು ಮಾಸ್ಕ್ ಧರಿಸುವ ಅಗತ್ಯವಿಲ್ಲ ನಿಮಗೆ ಆರೋಗ್ಯ ಸರಿ ಇಲ್ಲ ಎಂದರೆ ಮಾಸ್ಕ್ ಧರಿಸಿ ಎಂಬ ಪ್ರಕಟಣೆ ಮಾಡಿದ್ದು ನಾನು ಆರೋಗ್ಯವಂತನಾಗಿರುವುದರಿಂದ ನಾನು ಮಾಸ್ಕ್ ಧರಿಸಿಲ್ಲ, ಮಾಸ್ಕ್ ಧರಿಸಿಲ್ಲ ಎಂಬುವುದಕ್ಕೆ ನನ್ನ ಮೇಲೆ 3 ವರ್ಷ ಹಿಂದೆ ಪೊಲೀಸರು ಕೇಸ್ ಹಾಕಿದ್ದಾರೆ. ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ 26 ಕಿ.ಮೀ ದೂರ ಸೈಕಲ್ ಮೂಲಕವೇ ಬರುತ್ತಿದ್ದೇನೆ. ನ್ಯಾಯಾಲಯಕ್ಕೆ ನಾನು ಬಲಿಷ್ಠ ಹಾಗೂ ಆರೋಗ್ಯವಂತನಾಗಿದ್ದೇನೆ ಎಂಬ ಸಂದೇಶ ನೀಡುತ್ತಿದ್ದೇನೆ ಎಂದರು.

Leave A Reply

Your email address will not be published.

error: Content is protected !!