ಮೀಸಲು ಅರಣ್ಯ ಒತ್ತುವರಿ | ದಿವ್ಯ ಮೌನಕ್ಕೆ ಜಾರಿದ ಇಲಾಖೆ ; ಸಿಬ್ಬಂದಿಗಳೇ ಶಾಮೀಲಾಗಿರುವ ಶಂಕೆ ! ಒತ್ತುವರಿ ತೆರವಿಗೆ ಗ್ರಾಮಸ್ಥರ ಒತ್ತಾಯ

0 2,022


ಹೊಸನಗರ: ತಾಲೂಕಿನ ಕಸಬಾ ಹೋಬಳಿ ಮಾರುತಿಪುರ ಗ್ರಾಮದ ಸರ್ವೆ ನಂಬರ್ 6ರ ಮೀಸಲು ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವ ಅನಧಿಕೃತವಾಗಿ ಮೀಸಲು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕೃಷಿ ಚಟುವಟಿಕೆಗೆ ಮುಂದಾಗಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದು, ಕೂಡಲೇ ಅರಣ್ಯ ಒತ್ತುವರಿ ತೆರವುಗೊಳಿಸವಂತೆ ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಯಂತ್ರ ಬಳಸಿ ಅಡಿಕೆ ಸಸಿ ನೆಡಲು ಗುಂಡಿ ತೋಡಿರುವುದು.


ಮಾರುತಿಪುರ ಗ್ರಾಮದ ವಾಸಿ ಶಾಂತಾರಾಮ ಹೆಗಡೆ ಎಂಬಾತ, ಕಳೆದ ಕೆಲವು ದಿನಗಳಿಂದ ಈ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲುಸಾಗಿ ಬೆಳೆದಿದ್ದ ಲಕ್ಷಾಂತರ ರೂ‌. ಮೌಲ್ಯದ ಕಾಡು ಗಿಡಮರಗಳನ್ನು ಕಡಿದು, ಕೃಷಿ ಚುಟುವಟಿಕೆಗೆ ಒತ್ತುವರಿ ಮಾಡಿದ್ದು, ವಿಷಯ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ಗ್ರಾಮಸ್ಥರು ತಂದು ಹಲವು ದಿನಗಳೇ ಕಳೆದರು ಇಲಾಖೆ ಆತನ ವಿರುದ್ದ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಗ್ರಾಮಸ್ಥರಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿದೆ.

ಈ ಭಾಗದ ಅರಣ್ಯಾಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ಸ್ಥಳೀಯ ಜನತೆ ಶಂಕೆ ವ್ಯಕ್ತಪಡಿಸಿದ್ದು, ಕೂಡಲೇ ಇಲಾಖೆಯ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ಕುರಿತಂತೆ ಸಂಪೂರ್ಣ ತನಿಖೆ ಕೈಗೊಂಡು ಅಕ್ರಮ ಅರಣ್ಯ ಒತ್ತುವರಿ ತೆರವುಗೊಳಿಸುವುವಂತೆ ಕೋರಿದ್ದಾರೆ. ತಪ್ಪಿದ್ದಲ್ಲಿ ಜನಸಂಗ್ರಾಮ ಪರಿಷತ್ತಿನ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.

ಮೀಸಲು ಅರಣ್ಯ ಒತ್ತುವರಿ ಆಗಿರುವ ಪ್ರದೇಶ.
Leave A Reply

Your email address will not be published.

error: Content is protected !!