ವರ್ಣರಂಜಿತವಾಗಿ ನಡೆದ ರಾಧಾಕೃಷ್ಣ ವೈಭವ

0 115

ಹೊಸನಗರ : ಪಟ್ಟಣದ ಪೂರ್ವ ಪ್ರಾಥಮಿಕ ವಿದ್ಯಾಸಂಸ್ಥೆ, ಶ್ರೀ ವಿದ್ಯಾ ಸಂವಿಧಾನಂನಲ್ಲಿ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾರಂಭದ ಪ್ರಯುಕ್ತ ಏರ್ಪಡಿಸಿದ ರಾಧಾಕೃಷ್ಣ ವೈಭವ ವರ್ಣರಂಜಿತವಾಗಿ ನಡೆಯಿತು.

ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಮಾಜಿ ಉಪಾಧ್ಯಕ್ಷೆ ಕೃಷ್ಣವೇಣಿ, ಉಪನ್ಯಾಸಕಿ ಸಾಮಾಜಿಕ ಕಾರ್ಯಕರ್ತೆ ಶೀಲಾ ರಾಮನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಣ್ಣರ ವೈಭವ ನೋಡಲು ಎರಡು ಕಣ್ಣು ಸಾಲದು. ಅವರಿಗೆ ನೀಡುವ ಪುರಸ್ಕಾರವನ್ನು ಪ್ರಥಮ, ದ್ವಿತೀಯ, ತೃತೀಯ ಎಂದು ವಿಭಾಗಿಸದೆ ಸ್ಪರ್ಧಿಸುವ ಎಲ್ಲಾ ಚಿಣ್ಣರಿಗೂ ಬಹುಮಾನ ನೀಡುವ ಮೂಲಕ ಅವರ ಪ್ರತಿಭೆಗೆ ಪುರಸ್ಕರಿಸಿ ಅವರಲ್ಲಿರುವ ಸಭಾಕಂಪನವನ್ನು ತೊಡಗಿಸಬೇಕೆಂದರು‌.

ನಾವೆಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಮಕ್ಕಳಲ್ಲೂ ಭಗವಾನ್ ಶ್ರೀ ಕೃಷ್ಣನನ್ನು ಕಾಣಬೇಕೆಂದರು ಈಗಿನಿಂದಲೇ ಮಕ್ಕಳಲ್ಲಿ ಜಾತಿ ಮತ ಭೇದಭಾವ ಕಾಣದಂತೆ ಒಗ್ಗೂಡಿ ಬಾಳುವ ಪರಿಸರ ರಚಿಸುವಂತೆ ಕರೆ ನೀಡಿದರು.

ರಂಜಿತಾ ಸ್ವಾಗತಿಸಿದರು. ಆಶಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಕೆ.ಪಿ ಶ್ರೀನಿವಾಸ್ ಅಭಾರ ಮನ್ನಿಸಿದರು.

Leave A Reply

Your email address will not be published.

error: Content is protected !!