ಹೊಸನಗರ ; ನೋಡುಗರನ್ನು ಆಕರ್ಷಿಸುತ್ತಿರುವ ವೀರಗಣಪತಿ ವಿಗ್ರಹ

0 683


ಹೊಸನಗರ: ಪಟ್ಟಣದ ಶಿವಮೊಗ್ಗ-ಕುಂದಾಪುರ ರಸ್ತೆಯಲ್ಲಿರುವ ವೀರಾಂಜನೇಯ ದೇವಸ್ಥಾನದ ಆವರಣದಲ್ಲಿ ಶ್ರೀ ವೀರಗಣಪತಿ ಯುವಕ ಸಂಘದವರ 15ನೇ ವರ್ಷದ ಗಣೇಶೋತ್ಸವವನ್ನು ಐದು ದಿನಗಳ ಕಾಲ ಪ್ರತಿಷ್ಠಾಪಿಸಿ ಆಚರಿಸುತ್ತಿದ್ದು ಈ ಪ್ರತಿಷ್ಠಾಪನೆ ಮಾಡಿರುವ ಗಣಪತಿ ವಿಗ್ರಹ ನೋಡುಗರನ್ನು ಆಕರ್ಷಿಸುತ್ತಿದೆ.


ಅಂಜನೇಯ ಸ್ವಾಮಿಯು ಗಣಪತಿಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಯಾತ್ರೆಗೆ ಹೋರಟಿರುವ ದೃಶ್ಯ ಮನಮೋಹಕವಾಗಿದೆ.
ಸೆ. 18ರಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ಮುಂದೆ ಎರಡು ದಿನಗಳ ಕಾಲ ಅದ್ದೂರಿ ಪೂಜೆ ಕಾರ್ಯಕ್ರಮ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆದಿದ್ದು ಸೆ.21 ರಂದು ಬೆಳಗ್ಗೆ 10:00ಗಂಟೆಗೆ ವೀರಾಂಜನೇಯ ದೇವರಿಗೆ ಹಾಗೂ ಗಣಪತಿ ದೇವರಿಗೆ ವಿಶೇಷ ಪೂಜೆ ಗಣಹೋಮ, ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ಸೆ.22 ರಂದು ಬೆಳಗ್ಗೆ ಪೂಜೆ ಮಹಾಮಂಗಾರತಿ ಪ್ರಸಾದ ವಿನಿಯೋಗ, ಸಂಜೆ 5 ಗಂಟೆಗೆ ಶ್ರೀ ದೇವಸ್ಥಾನದ ಆವರಣದಿಂದ ವಿವಿಧ ವೈಶಿಷ್ಟ ಕಾರ್ಯಕ್ರಮಗಳೊಂದಿಗೆ ಡೊಳ್ಳುಕುಣಿತ, ಸುಮಧುರ ಮಂಗಳ ವಾದ್ಯಗಳೊಂದಿಗೆ ರಾಜಬೀದಿ ಮೆರವಣಿಗೆ ನೆರವೇರಿಸಿ ಶರಾವತಿ ಹಿನ್ನೀರಿನಲ್ಲಿ ವೀರಗಣಪತಿಸ್ವಾಮಿ ವಿಗ್ರಹ ವಿಸರ್ಜಿಸಲಾಗುವುದು.

ಇಷ್ಟು ಅದ್ದೂರಿಯಾಗಿ ನಡೆಯಲು ಸಹಕರಿಸಿದ ಸಾರ್ವಜನಿಕರನ್ನು ವೀರಗಣಪತಿ ಯುವಕ ಸಂಘದ ಅಧ್ಯಕ್ಷರಾದ ಅರ್ಜುನ್, ಮಾಧವ ಭಂಡಾರಿ, ಅಂಜನ್, ಹಾಗೂ ಮನೋಹರ್‌ರವರು ಅಭಿನಂದಿಸಿದ್ದಾರೆ.

ನಿತಿನ್ ನಾರಾಯಣ್ ಭೇಟಿ
ಹೊಸನಗರ: ಇಲ್ಲಿನ ಕೋರ್ಟ್ ಸರ್ಕಲ್ ಆವರಣದಲ್ಲಿ ಗಜಾನನ ಸೇವಾ ಸಮಿತಿಯವರು 47ನೇ ವರ್ಷದ ಗಣಪತಿ ವಿಗ್ರಹ ಸ್ಥಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದು ಈ ಸಂದರ್ಭದಲ್ಲಿ ಹೊಸನಗರ-ಬೈಂದೂರು ಕ್ಷೇತ್ರದ ಬಿಜೆಪಿ ಮುಖಂಡರಾದ ನಿತಿನ್ ನಾರಾಯಣ್‌ರವರು ಆಗಮಿಸಿ ಪೂಜೆ ಸಲ್ಲಿಸಿದರು.


ಗಜಾನನ ಸೇವಾ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್. ಗೋಪಾಲ್, ಗೌರವಾಧ್ಯಕ್ಷರಾದ ಪಿ ಮನೋಹರ್, ಖಾಜಾಂಚಿಯಾದ ಟಿ.ಆರ್ ಸುನೀಲ್ ಕುಮಾರ್, ಹೆಚ್.ಎಸ್. ಗಿರೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!