ಅಭಿನಂದನೆ ಸನ್ಮಾನಗಳು ಸಾಧನೆಯಿಂದ ಬರಬೇಕು ; ಎಸ್.ಹೆಚ್. ನಿಂಗಮೂರ್ತಿ

ಹೊಸನಗರ: ಅಭಿನಂದನೆಗಳು ಹಾಗೂ ಸಾಧನೆ ಸನ್ಮಾನಗಳು ನಾವು ಮಾಡುವ ಕೆಲಸದಿಂದ ಪರಿಶ್ರಮದಿಂದ ಹುಡುಕಿಕೊಂಡು ಬರಬೇಕೆ ಹೊರತು ಯಾವುದೇ ಇನ್‌ಪ್ಲೀಯನ್ಸ್ ಮೂಲಕ ಹಣ ನೀಡಿ ಸನ್ಮಾನ ಮಾಡಿಕೊಳ್ಳುವುದು ಸರಿಯಲ್ಲ ಎಂದು ವಾಲ್ಮೀಕಿ ಜನಾಂಗದ ತಾಲ್ಲೂಕು ಅಧ್ಯಕ್ಷರಾದ ಎಸ್.ಹೆಚ್. ನಿಂಗಮೂರ್ತಿಯವರು ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಹೊಸನಗರ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಆಚರಿಸಲಾಗಿದ್ದು ಎಸ್.ಎಸ್.ಎಲ್.ಸಿಯಲ್ಲಿ ತಾಲ್ಲೂಕಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮಾತನಾಡಿದರು.

ಇತ್ತೀಚಿನ ದಿನದಲ್ಲಿ ಅಭಿನಂದನೆ ಸನ್ಮಾನಗಳು ಸರ್ವೆ ಸಾಮಾನ್ಯವಾಗಿದೆ ಎಲ್ಲ ಸಂಘ-ಸಂಸ್ಥೆಗಳ ಸಮಾರಂಭದಲ್ಲಿ ತಮಗೆ ಬೇಕಾದವರಿಗೆ ಸನ್ಮಾನ ಮಾಡುವುದು ಸುದ್ಧಿ ಪತ್ರಿಕೆಯಲ್ಲಿ, ವಾಟ್ಸಾಪ್ ಮೂಲಕ ಪ್ರಚಾರ ಪಡೆಸುವುದು ಸರ್ವೆ ಸಾಮಾನ್ಯವಾಗಿದೆ. ಸನ್ಮಾನ ಮಾಡುವವರು ಹಾಗೂ ಸನ್ಮಾನ ಸ್ವೀಕರಿಸುವವರು ಯಾವ ಸಾಧನೆಯಿಂದ ಸನ್ಮಾನ ಮಾಡಲಾಗುತ್ತಿದೆ, ಸ್ವೀಕರಿಸುವವರು ನಾನು ಇಂಥಹ ಸಾಧನೆ ಮಾಡಿದ್ದೇವೆ ಎಂದ ಕಾರಣಕ್ಕೆ ಸನ್ಮಾನ ಮಾಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಮಾಜದ ಎಲ್ಲರಿಗೂ ಒಂದೊಂದು ರೀತಿಯಲ್ಲಿ ಯಾವುದೇ ಸಾಧನೆ ಮಾಡದೇ ಸನ್ಮಾನ ಮಾಡಿಸಿಕೊಳ್ಳುತ್ತಿರುವುದರಿಂದ ನಿಜವಾದ ಸಾಧಕರಿಗೆ ಅವಮಾನ ಮಾಡಿದಂತಾಗುತ್ತಿದೆ ಎಂದು ಹಿಂದಿನವರ ಋಷಿ ಮುನಿಗಳ ಬಗ್ಗೆ ಇಂದಿನ ಜನರಿಗೆ ತಿಳುವಳಿಕೆ ಜ್ಞಾನ ಇಲ್ಲವಾದರೆ ಮುಂದಿನ ಜನಾಂಗದವರು ಇವರನ್ನು ಮರೆಯುತ್ತಾರೆ ಇಂದು ಮೊಬೈಲ್‌ಯುಗದಲ್ಲಿ ಮಕ್ಕಳಿಗೆ ತಂದೆ-ತಾಯಿಯವರ ನೆನಪು ಅಗದಂತೆ ಕಂಡು ಬರುತ್ತಿದ್ದು ಮುಂದೆ ಬಹಳ ಕಷ್ಟಕರವಾಗುತ್ತಿದ್ದು ಮುಂದಿನ ಯುಗದ ಜನಾಂಗ ಹಿರಿಯರನ್ನು ಮರೆಯುವ ಸಂಭವವೇ ಹೆಚ್ಚು ಎಂದರು.

ವಾಲ್ಮೀಕಿ ಜಯಂತಿಯ ಪ್ರಯುಕ್ತ ವಾಲ್ಮೀಕಿಯವರ ಬಗ್ಗೆ ಹೊಸನಗರ ಖ್ಯಾತ ಸಾಹಿತಿ ಅಂಬ್ರಯ್ಯಮಠರವರು ಉಪನ್ಯಾನ ನೀಡಿ, ಆಶ್ವಯುಜ ತಿಂಗಳ ಹುಣ್ಣಿಮೆಯ ದಿನಾಂಕವನ್ನು ಮಹಾಕಾವ್ಯ ರಾಮಾಯಣದ ಸೃಷ್ಠಿಕರ್ತ ಮಹರ್ಷಿ ವಾಲ್ಮೀಕಿಯ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಇವರು ಹಿಂದು ಧರ್ಮಕ್ಕೆ ರಾಮಾಯಣದಂತಹ ಮಹಾಕಾವ್ಯವನ್ನು ಕೊಡುಗೆಯಾಗಿ ನೀಡಿದವರು ಇಂತಹ ವ್ಯಕ್ತಿ ಇಂದು ಜೀವಂತವಿಲ್ಲ ಅದರೆ ಅವರು ನೀಡಿರುವ ಕೊಡಿಗೆ ವಿಶ್ವಕ್ಕೆ ಮಾದರಿಯಾಗಿದೆ ಇಂತವರ ಜನ್ಮ ದಿನಚರಣೆಯಿಂದ ನಾವು ಇವರ ಕೊಡಿಗೆಯನ್ನು ಸ್ಮರಿಸುವುದರ ಜೊತೆಗೆ ಅವರಲ್ಲಿರುವ ಒಳ್ಳೆಯ ಗುಣವನ್ನು ಮೈಗೂಡಿಸಿಕೊಂಡು ನಾವು ಅವರಂತೆ ಬಾಳಾಬೇಕೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸನಗರ ತಹಶೀಲ್ದಾರ್ ರಾಕೇಶ್‌ ಫ್ರಾನ್ಸಿಸ್ ಬ್ರಿಟ್ಟೋ ರವರು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕ ಶಿವಕುಮಾರ್, ಪಟ್ಟಣ ಪಂಚಾಯತಿ ಸದಸ್ಯೆ ಗುಲಾಬಿ ಮರಿಯಪ್ಪ, ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಇಂಜಿನಿಯರ್ ವಿಶ್ವಾಸ್, ದೈಹಿಕ ಪರಿವೀಕ್ಷಕ ಬಾಲಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್2 ಸಹಾಯಕ ನಿರ್ದೇಶಕಿ ಗೀತಾ, ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ಪ್ರಥಮ ದರ್ಜೆ ಗುಮಾಸ್ತೆ ಸರೋಜಿನಿ, ರಾಘವೇಂದ್ರ, ನಂದಿನಿ ಹಾಸ್ಟಲ್ ವಾರ್ಡನ್‌ಗಳು ಕೆಲವು ಸರ್ಕಾರಿ ಕಛೇರಿಯ ಸಿಬ್ಬಂದಿಗಳು ಊರಿನ ಪ್ರಮುಖರು ಉಪಸ್ಥಿತರಿದ್ದರು.

Malnad Times

Recent Posts

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 75.02 ರಷ್ಟು ಮತದಾನ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.75.02 ರಷ್ಟು ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ…

3 hours ago

ಏ.30 ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ನಡ್ಡಾ ; ಬಿವೈಆರ್

ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…

14 hours ago

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

19 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

1 day ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

2 days ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

2 days ago