ಅನುಮತಿ ಪಡೆಯದೇ ಬಿ.ಕೆ ಸಂಗಮೇಶ್ ಪರ ಪ್ರಚಾರ ಮಾಡುತ್ತಿದ್ದ ವಾಹನ ವಶಕ್ಕೆ

0 51

ಭದ್ರಾವತಿ : ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಸಂಗಮೇಶ್ ಅವರ ಪರವಾಗಿ ಅನುಮತಿ ಪಡೆಯದೇ ಪ್ರಚಾರ ಮಾಡುತ್ತಿದ್ದಂತ ವಾಹನವನ್ನು ಮಂಗಳವಾರ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿದ್ದು, ಶ್ರೀ ರಾಘವೇಂದ್ರ ಫ್ಲೈಯಿಂಗ್ ಸ್ಕ್ವಾಡ್ 02 ನೇ ತಂಡದ ಅಧಿಕಾರಿ, ಭದ್ರಾವತಿ ವಿಧಾನ ಸಭಾ ಕ್ಷೇತ್ರ ರವರು ಏ‌.03ರಂದು ಸಂಜೆ ಫ್ಲೈಯಿಂಗ್ ಸ್ಕ್ವಾಡ್ ನ ಸದಸ್ಯರಾದ ಶ್ರೀ ಗವಿರಂಗಪ್ಪ ರವರೊಂದಿಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ಕೆ ಜಂಕ್ಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಕಾಂಗ್ರೆಸ್ ಪಕ್ಷದ ಪರವಾಗಿ ಯಾವುದೇ ಅನುಮತಿ ಇಲ್ಲದೇ ವಾಹನದಲ್ಲಿ ಪ್ರಚಾರ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಬಂದಿತ್ತು ಎಂದಿದ್ದಾರೆ.

ಈ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿ ಟಾಟಾ ಎಸಿಇ ವಾಹನದ ಹಿಂಬದಿಗೆ ಭದ್ರಾವತಿಯ ಮಾನ್ಯ ಶಾಸಕರಾದ ಬಿ.ಕೆ ಸಂಗಮೇಶ್ವ‌ ರವರ ಚಿತ್ರ ಹಾಗೂ ಕಾಂಗ್ರೆಸ್ ಮುಖಂಡರುಗಳ ಚಿತ್ರ ಇರುವ ಪೋಸ್ಟರ್ ಅಂಟಿಸಿಕೊಂಡು ವಾಹನದ ಒಳಗಡೆ ಸ್ಪೀಕರ್ ಬಾಕ್ಸ್ ಇಟ್ಟುಕೊಂಡು ಎಲ್‌ಇಡಿ ಪರದೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರದ ಮುದ್ರಿತ ಧ್ವನಿ ಪ್ರಸಾರವಾಗುತ್ತಿದ್ದು, ವಾಹನದ ಚಾಲಕನಾದ ಚಂದ್ರು ಈತನನ್ನು, ಪ್ರಚಾರ ಮಾಡಲು ಚುನುವಣಾ ಆಯೋಗದಿಂದ ಪಡೆಯಲಾದ ಅನುಮತಿ ಪತ್ರದ ಬಗ್ಗೆ ವಿಚಾರಿಸಿಲಾಗಿ ಆತನು ಯಾವುದೇ ಅನುಮತಿ ಪತ್ರ ಇಲ್ಲವೆಂದು ತಿಳಿಸಿರುತ್ತಾನೆ ಎಂದಿದೆ.

ಸದರಿ ವಾಹನದ ಚಾಲಕನು ಸಾರ್ವಜನಿಕ ಸ್ಥಳದಲ್ಲಿ ಚುನುವಣಾ ಆಯೋಗದ ಅನುಮತಿ ಪಡೆಯದ ಕಾಂಗ್ರೆಸ್ ಪಕ್ಷದ ಚಿನ್ಹೆ ಇರುವ ಪೋಸ್ಟರ್ ಗಳನ್ನು ವಾಹನಕ್ಕೆ ಹಾಕಿಕೊಂಡು, ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವುದು ಕಂಡುಬಂದಿದ್ದು ಇದು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಆಗಿರುತ್ತದೆ ಎಂದು ಶ್ರೀ ರಾಘವೇಂದ್ರ ಫ್ಲೈಯಿಂಗ್ ಸ್ಕ್ವಾಡ್ 02 ನೇ ತಂಡದ ಅಧಿಕಾರಿ ಯವರು ನೀಡಿದ ದೂರಿನ ಮೇರೆಗೆ ವಾಹನದ ಚಾಲಕ ಶಿವಮೊಗ್ಗದ ವಿನೋಬನಗರ ನಿವಾಸಿ ಚಂದ್ರಪ್ಪ (26) ಈತನ ವಿರುದ್ಧ RP Act & Karnataka Open Disfigurement Act ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

Leave A Reply

Your email address will not be published.

error: Content is protected !!