ಪೊಲೀಸರ ಕಿರುಕುಳಕ್ಕೆ ನೇಣಿಗೆ ಶರಣಾದ್ನಾ ಯುವಕ…?
ಭದ್ರಾವತಿ : ಪೊಲೀಸರ ಕಿರುಕುಳದಿಂದ ಮರ್ಯಾದೆಗೆ ಅಂಜಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಆರೋಪವೊಂದು ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಕೇಳಿಬಂದಿದೆ.
ಕೋಣೆಕೊಪ್ಪ ನಿವಾಸಿ ಮಂಜುನಾಥ್ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಇದೇ ತಿಂಗಳ 11 ರಂದು ಸಂಜೆ ವೇಳೆ ಹೊಳೆಹೊನ್ನೂರಿನಲ್ಲಿ ಕಾರಣವಿಲ್ಲದೇ ಮಂಜುನಾಥ್ ನನ್ನು ಪೊಲೀಸರು ಕರೆದೊಯ್ಯುದಿದ್ದು, ಮಂಜುನಾಥ್ ಗೆ ನಾಲ್ಕು ಪೊಲೀಸರಿಂದ ಕಿರುಕುಳ ನೀಡಿರುವ ಆರೋಪ ಮೃತ ಮಂಜುನಾಥ್ ಪತ್ನಿ ಕಮಲಾಕ್ಷಿ ಮಾಡುತ್ತಿದ್ದು, ಪೊಲೀಸರ ವಿರುದ್ಧವೇ ಕೇಸ್ ದಾಖಲಾಗಿದೆ.

ನಾಲ್ಕು ತಿಂಗಳ ಗರ್ಭಿಣಿಯಾದ ಮಂಜುನಾಥ್ ಪತ್ನಿ ಕಮಲಾಕ್ಷಿ, ಮಂಜುನಾಥ್ ನನ್ನು ಕರೆದೊಯ್ಯುದ ಪೊಲೀಸರು ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಂತರ ಮನೆಗೆ ಬಂದ ಮಂಜುನಾಥ್ ಮಾನಸಿಕವಾಗಿ ಕುಗ್ಗಿ ಹೋಗಿದ್ದು ಹಾಗೂ ಮರ್ಯಾದೆಗೆ ಅಂಜಿ ಮನೆಯಲ್ಲೇ ಇದ್ದರು ಎಂದು ತಿಳಿಸಿದ್ದಾರೆ. ಮಂಜುನಾಥ್ ಮೊನ್ನೆ ರಾತ್ರಿ ಹೆಂಡತಿಯನ್ನು ಬೇರೆ ರೂಂ ನಲ್ಲಿ ಮಲಗುವಂತೆ ಹೇಳಿ ನೇಣಿಗೆ ಶರಣಾಗಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಕೂಡ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಲಾಕ್ ಅಪ್ ಡೆಥ್ ಪ್ರಕರಣವೊಂದು ದಾಖಲಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪೊಲೀಸರ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ.