Hosanagara | ಅಕ್ರಮ ಮರಳು ಸಾಗಾಟ ; ಮೂರು ಟಿಪ್ಪರ್ ಲಾರಿ ವಶಕ್ಕೆ !
ಹೊಸನಗರ ; ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತಿದ್ದ 03 ಟಿಪ್ಪರ್ ಲಾರಿಗಳನ್ನು ಹೊಸನಗರ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ತಾಲೂಕಿನ ಸೊನಲೆ ಗ್ರಾಮದ ಬಳಿ ನಾಗರಕೊಡಿಗೆ ವಾಸಿ ರಾಮಚಂದ್ರ ಎಂಬುವವರ ಲಾರಿಯನ್ನು ವಶಕ್ಕೆ ಪಡೆದರೆ, ಪಟಗುಪ್ಪ ಬಳಿ ದುಮ್ಮಾ ವಿಶ್ವನಾಥ ಬಿನ್ ಅಶೋಕ್ ಎಂಬುವವರ ಲಾರಿ ಮತ್ತು ಹೆಬೈಲು ಬಳಿ ಪಟಗುಪ್ಪ ಗ್ರಾಮದ ದುಮ್ಮಾ ವಾಸಿ ಸಿದ್ದೇಶ ಬಿನ್ ರಾಜಪ್ಪಗೌಡ ಎಂಬುವವರ ಲಾರಿಯನ್ನು ವಶಕ್ಕೆ ಪಡೆದು ಹೊಸನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಈ ದಾಳಿಯಲ್ಲಿ ಪಿಎಸ್ಐ ಪ್ರವೀಣ್ ಸಿಬ್ಬಂದಿಗಳಾದ ಗಂಗಪ್ಪ, ಸುನೀಲ್, ಡ್ರೈವರ್ ಅವಿನಾಶ್ ಇದ್ದರು.
