Hosanagara | ನಿವೃತ್ತ ಪ್ರಾಂಶುಪಾಲ ಗಣೇಶ್ ಐತಾಳ್ ಇನ್ನಿಲ್ಲ !

0 1,374


ಹೊಸನಗರ: ಪಟ್ಟಣದ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಎರಡು ವರ್ಷಗಳ ಹಿಂದೆ ವಯೋನಿವೃತ್ತಿ ಪಡೆದಿರುವ ಗಣೇಶ್ ಐತಾಳ್‌ (62) ಅನಾರೋಗ್ಯದ ಕಾರಣ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದರು.


ಇವರ ಪಾರ್ಥಿವ ಶರೀರವನ್ನು ರಾತ್ರಿಯೇ ಇವರ ಸ್ವಗೃಹ ಹನಿಯಾಕ್ಕೆ ತರಲಾಗಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗದವರನ್ನು ಅಗಮಿದ್ದಾರೆ.


ಸಂತಾಪ:

ಹೊಸನಗರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿರಾವ್‌ರವರ ನೇತೃತ್ವದಲ್ಲಿ ಉಪನ್ಯಾಸಕ ತಂಡ ಹಾಗೂ ವಿದ್ಯಾರ್ಥಿಗಳು ಒಂದು ನಿಮಿಷ ಮೌನಾಚರಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.


ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಾ|| ರಾಮಚಂದ್ರರಾವ್, ಬರಹಗಾರರಾದ ಎನ್ ಶ್ರೀಧರ ಉಡುಪ, ಎನ್ ದತ್ತಾತ್ರೇಯ ಉಡುಪ, ಪ್ರಭಾಕರ್ ಶ್ರೀಪತಿರಾವ್ ಇನ್ನೂ ಮುಂತಾದವರು ಇವರ ಮನೆಗೆ ತೆರಳಿ ಸಂತಾಪ ಸೂಚಿಸಿದರು.

Leave A Reply

Your email address will not be published.

error: Content is protected !!