Hosanagara | ಮುಷ್ಠಿಯಷ್ಟು ಸದಸ್ಯರಿದ್ದರೆ ಬಲಿಷ್ಠ ಸಮಾಜ ನಿರ್ಮಾಣ ಮಾಡಬಹುದು ; ಬೇಳೂರು ಗೋಪಾಲಕೃಷ್ಣ


ಹೊಸನಗರ: ಯಾವುದೇ ಸಂಘ ಸಂಸ್ಥೆಗಳಲ್ಲಿ ಮುಷ್ಠಿಯಷ್ಟು ಸದಸ್ಯರ ಬಲವಿದ್ದರೇ ಅದರಲ್ಲಿ ಇರುವ ಸದಸ್ಯರ ಹೊಂದಾಣಿಕೆಯಿದ್ದರೇ ಎಂತಹ ಬಲಿಷ್ಠ ಸಂಘ ಸಂಸ್ಥೆಯಾಗಿ ಬೆಳೆದು ಸಮಾಜದ ಒಗ್ಗಟನ್ನು ಪ್ರದರ್ಶಿಸಬಹುದು ಎಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಹೇಳಿದರು.


ಪಟ್ಟಣದ ಸೀತಾರಾಮಚಂದ್ರ ಸಭಾಭವನದ ಆವರಣದಲ್ಲಿ ಕೋಟೆಗಾರ್ ವಿದ್ಯಾವರ್ಧಕ ಸಂಘದ ವತಿಯಿಂದ 8ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಹೊಸನಗರದಲ್ಲಿ ಕೋಟೆಗಾರ್ ಜನಾಂಗದ ಜನಸಂಖ್ಯೆ ಇರುವುದು ಕೇವಲ 1500 ಜನ ಎಂದು ಹೇಳುತ್ತೀದ್ದಿರ ಕೇವಲ 350 ಮನೆಗಳಿವೆ ಎಂದು ಹೇಳಲಾಗಿದೆ ಆದರೆ ಇಷ್ಟೇ ಜನಸಂಖ್ಯೆ ಇರುವ ನೀವು ಇಷ್ಟು ದೊಡ್ಡ ಸಭಾಭವನ ನಿರ್ಮಿಸಿದ್ದೀರಿ ಇನ್ನೂ ದೇವಸ್ಥಾನ ಕಟ್ಟಲು ಹೊರಟಿದ್ದಿರಿ, ಇವೆಲ್ಲವೂ ನಿಮ್ಮ ಜನಾಂಗದ ಜನರಲ್ಲಿರುವ ಹೊಂದಾಣಿಕೆ ಮತ್ತು ಸಂಘದ ಸದಸ್ಯರ ಪರಿಶ್ರಮದಿಂದ ಸಾಧ್ಯವಾಗಿದೆ. ಅದೇ ನಮ್ಮ ಈಡಿಗ ಜನಾಂಗ ತಾಲ್ಲೂಕಿನಲ್ಲಿ 50 ಸಾವಿರಕ್ಕಿಂತ ಹೆಚ್ಚು ಜನ ಸಂಖ್ಯೆಯಿದ್ದು ಒಂದು ಸಭಾಭವನ ನಿರ್ಮಿಸಲು ಇಷ್ಟು ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ, ನಾನು ಶಾಸಕನಾಗಿರುವುದು ಯಾವ ಜಾತಿಗೂ ಸೀಮಿತವಾಗಿರದೇೆ ಎಲ್ಲ ಜನಾಂಗದ ಕಷ್ಟ-ಸುಖಗಳಿಗೂ ಭಾಗಿಯಾಗುತ್ತೇನೆ ಎಲ್ಲಾ ಜಾತಿ ಜನಾಂಗದವರಿಗೂ ಸಹಾಯ ಮಾಡಲು ನಾನು ಶಾಸಕನಾಗಿದ್ದೂ ನನಗೆ ಯಾವುದೇ ಮಧ್ಯವರ್ತಿಗಳ ಅವಶ್ಯಕತೆಯಿಲ್ಲ ನೇರವಾಗಿ ನನ್ನ ಬಳಿ ಬಂದು ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ ನನ್ನಿಂದ ಆಗುವ ಕೆಲಸ ಮತ್ತು ಸಹಾಯ ಹಸ್ತ ನೀಡಲು ಸಿದ್ಧನಿದ್ದೇನೆ ಎಂದರು.


ಈ ಸಮಾರಂಭದ ಅಧ್ಯಕ್ಷತೆಯನ್ನು ಕೋಟೆಗಾರ್ ಸಂಘದ ಅಧ್ಯಕ್ಷರಾದ ಹೆಚ್.ಆರ್. ಶಶಿಧರ್‌ನಾಯ್ಕ್ ರವರು ವಹಿಸಿ ಮಾತನಾಡಿ, ಒಂದು ಸಮಾಜ ಬೆಳೆಯಬೇಕಾದರೆ ಸದಸ್ಯರ ಪಾತ್ರ ಹಿರಿದಾಗಿದೆ ಎಲ್ಲರೂ ಒಟ್ಟಾಗಿ ಈ ನಮ್ಮ ಸಮಾಜವನ್ನು ಬೆಳೆಸುವುದರ ಜೊತೆಗೆ ಕರ್ನಾಟಕ ರಾಜ್ಯದಲ್ಲಿಯೇ ನಮ್ಮ ಸಮಾಜ ಗುರುತಿಸುವಂತೆ ಕೆಲಸ ಮಾಡಬೇಕಾಗಿದೆ ಎಲ್ಲರೂ ಒಟ್ಟಿಗೆ ದುಡಿಯೋಣ ಎಂದರು.


ಎಸ್.ಎಸ್.ಎಲ್.ಸಿ, ಪಿಯುಸಿ, ಡಿಗ್ರಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶ್ವರಾಮಕ್ಷತ್ರೀಯ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಡಿ.ಕೆ ಗಣೇಶ, ತೀರ್ಥಹಳ್ಳಿಯ ಎ.ಸಿ.ಎಫ್ ಮಂಜುನಾಥ್ ಕೆ.ಎನ್, ಗೌರವಾಧ್ಯಕ್ಷರಾದ ಬಿ.ಗೋವಿಂದಪ್ಪ, ಮಹಿಳಾ ಸಂಘದ ಅಧ್ಯಕ್ಷೆ ಶಾರದ, ಯುವಕ ಸಂಘದ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾದ ಹೆಚ್.ಆರ್.ಸುರೇಶ್, ಹೆಚ್.ಜಿ. ರಾಘವೇಂದ್ರ, ಸಬಾಭವನದ ಕಾರ್ಯದರ್ಶಿ ಶ್ರೀನಿವಾಸ್ ಹೆಚ್, ಕೆ.ಜಿ. ನಾಗೇಶ್, ಗಣೇಶ ಎನ್, ಗುತ್ತಿಗೆದಾರ ಹೆಚ್.ವಿ.ಮಹಾಬಲ, ಪಿ.ಆರ್. ಸಂಜೀವಣ್ಣ, ಮನೋಹರ, ಪ್ರವೀಣ್, ವಿಠೋಭಾನಾಯ್ಕ್, ಸುಬ್ರಹ್ಮಣ್ಯ, ಗೋವಿಂದರಾವ್, ಕೋಡಿ ಚಂದ್ರಶೇಖರ, ದಿನಮಣಿ, ಸತ್ಯ ನಾರಾಯಣ, ಮಂಜುನಾಥ್ ಎಂ, ಹೆಚ್.ಎಸ್. ಮಂಜುನಾಥ್, ಶ್ರೀನಿಧಿ ಗೋಪಾಲ್, ನಿತ್ಯಾನಂದ ಹೆಚ್.ಎಂ. ಗೋಪಾಲ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಬಿ.ಜಿ.ನಾಗರಾಜ್, ಚಂದ್ರಮೌಳಿ, ಗುರುರಾಜ್, ಸದಾಶಿವ ಶ್ರೇಷ್ಠಿ, ಬಾಳೆಕೊಪ್ಪ ಗಣೇಶ, ಹಾಗೂ ಯುವಕ ಮಂಡಳಿಯ ಸದಸ್ಯರು ಮಹಿಳಾ ಮಂಡಳಿಯ ಸದಸ್ಯರು ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Malnad Times

Share
Published by
Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

2 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

3 days ago