ಅಂಗವಿಕಲರಿಗೆ ಸರ್ಕಾರದ ಸೌಲಭ್ಯ ನೀಡಿ ಅವರ ಜೀವ ಉಳಿಸಿ

0 0


ಹೊಸನಗರ: ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆರಿಗೆ ಐದು ಸೌಲಭ್ಯದ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಶೇ.100ರಷ್ಟು ಪಕ್ಕ ಮತದಾನ ಮಾಡಿದವರು ಅಂಗವಿಕಲರು ಆದರೆ ನಮ್ಮ ರಾಜ್ಯ ಕಾಂಗ್ರೆಸ್ ನೇತೃತ್ವದ ಸಿದ್ಧರಾಮಯ್ಯ ಸರ್ಕಾರ ಅಂಗವಿಕಲರಿಗೆ ಯಾವುದೇ ಭರವಸೆ ನೀಡಿಲ್ಲ ಈ ಬಾರಿ ಬಜೆಟ್‌ನಲ್ಲಿ ಅವರಿಗಾಗಿ ವಿಶೇಷ ಅನುದಾನದ ಜೊತೆಗೆ ಸಹಾಯ ಹಸ್ತ ನೀಡಬೇಕೆಂದು ಹೊಸನಗರ ತಾಲ್ಲೂಕಿನ ಅಂಗವಿಕಲರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.


ಹೊಸನಗರ ತಾಲ್ಲೂಕಿನಲ್ಲಿ 1300 ಜನ ಅಂಗವಿಕಲರು ಪ್ರತಿ ತಿಂಗಳು 1400 ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ. ಕೆಲವರಿಗೆ ಕಾಲುಗಳಿಲ್ಲ ಕೆಲವರಿಗೆ ಕೈಗಳಿಲ್ಲ ದೇಹದ ಒಂದೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಕೆಲವರು ದೇಹದ ಅಂಗಾಂಗ ಸರಿಯಿದ್ದವರು ಪಿಂಚಣಿ ಪಡೆಯುತ್ತಿದ್ದಾರೆ ಮತ್ತು ಪಿಂಚಣಿ ಜೊತೆಗೆ ಕೆಲಸವನ್ನು ಮಾಡಿ ದುಡಿದು ಹಣ ಸಂಗ್ರಹಿಸುತ್ತಿದ್ದಾರೆ ಇಂತವರ ಬಗ್ಗೆ ಮಾತನಾಡುವುದು ಬೇಡ.


ಶೇ. 90 ಅಂಗವಿಕರಿಗೆ ಪಿಂಚಣಿ ಹಣ ಏರಿಸಿ:
ಹೊಸನಗರ ತಾಲ್ಲೂಕಿನಲ್ಲಿ ಶೇ. 90 ಅಂಗವಿಕಲರಿದ್ದೂ ಅವರನ್ನು ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಗುರುತಿಸಬೇಕಾಗಿದೆ ಚುನಾವಣೆಯ ಸಂದರ್ಭದಲ್ಲಿ ಶೇ. 100 ವೋಟು ಹಾಕಿಸಲು ಅವರನ್ನು ಕರೆತರುವ ವ್ಯವಸ್ಥೆ ಮಾಡುವವರು ಚುನಾವಣೆ ಮುಗಿದೊಡನೇ ಅವರನ್ನು ಮರೆಯುವುದು ಎಷ್ಟು ಸಮಂಜಸ? 75% ರಿಂದ 90% ಅಂಗವಿಕಲರು ಮನೆಯಲ್ಲಿಯೇ ಮಲಗಿರುವವರು ಕೆಲವರು ಮನೆಯಿಂದ ಹೊರ ಬಾರಲಾರದೇ ತೊಳಲಾಟ ನಡೆಸುವವರು ನಮ್ಮ ಕಣ್ಣ ಮುಂದೆಯೇ ಸಿಗುತ್ತಾರೆ ಇವರಿಗೆ ಮಾತ್ರೆ, ಔಷಧಿಗಳಿಗೆ ತಿಂಗಳಿಗೆ 3000 ದಿಂದ 4000ದವರೆಗೆ ಬೇಕು ಇಂತವರನ್ನು ಗುರುತಿಸಿ ಸರ್ಕಾರ ಇವರ ಪಿಂಚಣಿ ಹಣ ಏರಿಸಬೇಕಾಗಿದೆ. ಸರ್ಕಾರ ನೀಡುವ ಪಿಂಚಣಿ ಹಣ 1400 ಎಲ್ಲಿ ಸಾಕಾಗುತ್ತದೆ ಸರ್ಕಾರ ತಕ್ಷಣ ಸ್ವಂದಿಸಬೇಕಾಗಿದೆ.
ಸರ್ಕಾರದ ಯೋಜನೆಯ ಮೂಲಕ ಕೆಲವರಿಗೆ ಎಲೆಕ್ಟ್ರಿಕಲ್ ಬೈಕ್, ಎಲೆಕ್ಟ್ರಿಕಲ್ ಸೈಕಲ್, ಮೂರು ಚಕ್ರದ ಗಾಡಿಗಳನ್ನು ನೀಡುತ್ತಿದೆ. ಎಲೆಕ್ಟ್ರಿಕಲ್ ಬೈಕ್‌ಗಳು ಒಂದು ವರ್ಷದ ಒಳಗೆ ಹಾಳಾಗುತ್ತಿದೆ ಇದನ್ನು ರಿಪೇರಿ ಮಾಡಿಸಲು ಮೆಕ್ಯಾನಿಕ್‌ಗಳಿಲ್ಲ ಕೆಲವು ಎಲೆಕ್ಟ್ರಿಕಲ್ ಬೈಕ್ ಮೂರು ಚಕ್ರದ ಗಾಡಿಗಳು ಮನೆಯ ಮೂಲೆ ಸೇರಿರುವ ದೃಶ್ಯಗಳು ಕಣ್ಣಿಗೆ ಕಾಣುತ್ತಿದೆ ಇವರಿಗೆ ಕೊಡುವುದಾದರೆ ವ್ಯವಸ್ಥಿತವಾಗಿರುವ ಓಡಾಡಲು ಸೂಕ್ತವಾಗಿರುವ ವಾಹನ ಕೊಡಿಸಿ ಎಂದು ಅಂಗವಿಕಲರು ಬೇಡಿಕೊಳ್ಳುತ್ತಿದ್ದರೂ ಇವರ ಬಗ್ಗೆ ಯಾವುದೇ ಸರ್ಕಾರ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ ಮುಂದದರೂ ಅಧಿಕಾರಿಗಳ ಹಾಗೂ ಇಲಾಖೆಯವರು ನೀಡುವ ಸೂಕ್ತ ಮಾರ್ಗದರ್ಶನ ಸರ್ಕಾರ ಪಡೆಯಲಿ


ಅಂಗವಿಕಲರ ಬೇಡಿಕೆಗಳು:

ಅಂಗವಿಕಲರು ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಈಗಾಗಲೇ ತಂದಿದ್ದು ಬೇಡಿಕೆಯಲ್ಲಿ ಪಿಂಚಣಿ ಹೆಚ್ಚಿಸಬೇಕು, ಅಂಗವಿಕಲರಿಗೆ ಅಂತ್ಯೋದಯ ಪಡಿತರ ಕಾರ್ಡ್ ವಿತರಿಸಬೇಕು, ಅಂಗವಿಕಲರ ಹಕ್ಕುಗಳ ಕಾಯ್ದೆಯಲ್ಲಿ ಗುರುತಿಸಲಾಗಿರುವ ಎಲ್ಲ ವಿಧದ ಅಂಗವಿಕಲರಿಗೆ ರೈಲ್ವೆ ರಿಯಾಯಿತಿ ನೀಡಬೇಕು, ಅಂಗವಿಕಲ ಹಕ್ಕುಗಳ ಕಾಯ್ದೆಯನ್ನು ಸಾಮಾಜಿಕ ಭದ್ರತೆಯ ಯೋಜನೆಗಳಲ್ಲಿ ಕಾರ್ಯಗತಗೊಳಿಸಬೇಕು, ಬಡತನ ಹೋಗಲಾಡಿಸುವ ಯೋಜನೆಗಳಾದ ನಿರುದ್ಯೋಗ ಭತ್ಯೆ, ಅಂಗವಿಕಲ ಪೋಷಕರಿಗೆ ಭತ್ಯೆಗಳ ಹಂಚಿಕೆಗಳನ್ನು ಹೆಚ್ಚಿಸಬೇಕು ಎಂದು ಹತ್ತು ಹಲವು ಬೇಡಿಕೆಗಳ ಪಟ್ಟಿ ಸರ್ಕಾರಕ್ಕೆ ಈಗಾಗಲೇ ತಲುಪಿಸಿದ್ದಾರೆ ರಾಜ್ಯದ ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯ ಸರ್ಕಾರ ಕಣ್ಣು ತೆರೆದರೆ ಶೇ. 75ರಿಂದ 100 ಅಂಗ ನ್ಯೂನತೆಯುಳ್ಳವರು ಬದುಕಲು ಸಾಧ್ಯ. ಸರ್ಕಾರ ಕಣ್ಣು ತೆರೆಯಲಿ.

Leave A Reply

Your email address will not be published.

error: Content is protected !!