ಅಗ್ನಿ ಅವಘಡ ; 600 ಅಡಿಕೆ ಗಿಡಗಳು ಸುಟ್ಟು ಭಸ್ಮ ! ಅಪಾರ ನಷ್ಟ

0 0

ಹೊಸನಗರ: ತಾಲ್ಲೂಕಿನ ಕಾಳಿಕಾಪುರ ಗ್ರಾಮದ ಸರ್ವೆನಂಬರ್ 32/1ರಲ್ಲಿ ಬಿ. ಸೀನಪೂಜಾರಿ ಬಿನ್ ಮಾಚಪೂಜಾರಿಯವರ ಅಡಿಕೆ ಮರಕ್ಕೆ ಬೆಂಕಿ ತಗುಲಿ ಸುಮಾರು 600 ಅಡಿಕೆ ಮರಗಳು ಸುಟ್ಟು ಕರಕಲಾದ ಘಟನೆ ವರದಿಯಾಗಿದೆ.


ಸೀನಪೂಜಾರಿಯವರು ತಮ್ಮ ಸ್ವಂತ ಜಾಗದಲ್ಲಿ ಸುಮಾರು 600 ಅಡಿಕೆ ಸಸಿಗಳನ್ನು ನೆಟ್ಟಿದ್ದು ಅದಕ್ಕೆ ಡ್ರಿಪ್ ಪೈಪ್ ಹಾಕಲಾಗಿತ್ತು. ಏಕಾಏಕಿ ಗಾಳಿಯ ಮೂಲಕ ಬೆಂಕಿ ತಗಲಿದ್ದರಿಂದ 600 ಅಡಿಕೆ ಮರಗಳು ಸುಟ್ಟು ಕರಕಲಾಗುವ ಜೊತೆಗೆ ನೀರಿನ ಸೌಲಭ್ಯಕ್ಕಾಗಿ ಮಾಡಿದ ಡ್ರಿಪ್ ಪೈಪ್ ಸಹ ಸುಟ್ಟು ಹೋಗಿದೆ. ಸುಮಾರು ಅಂದಾಜು 2 ಲಕ್ಷ ರೂ.ನಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.


ಹೊಸನಗರ ಆಗ್ನಿ ಶಾಮಕ ದಳದ ಸಿಬ್ಬಂದಿಯವರು ಸಮಯಕ್ಕೆ ಸರಿಯಾಗಿ ಆಗಮಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಿದ್ದಾರೆ.


ಗ್ರಾಮಾಡಳಿತಾಧಿಕಾರಿ ಕೌಶಿಕ್ ಭೇಟಿ:

ವಿಷಯ ತಿಳಿಯುತ್ತಿದ್ದಂತೆ ಕಸಬಾ ಗ್ರಾಮ ಆಡಳಿತಾಧಿಕಾರಿ ಕೌಶಿಕ್ ಹಾಗೂ ಗ್ರಾಮ ಸಹಾಯಕ ಅಶೋಕ್‌ರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅನಾಹುತವಾಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹಾಗೂ ಅನಾವೃಷ್ಠಿ ಪರಿಹಾರಕ್ಕೆ ಅರ್ಜಿ ಸಲ್ಲಿಸುವುದಕ್ಕೆ ತಿಳಿಸಿದರು.

Leave A Reply

Your email address will not be published.

error: Content is protected !!