ಅಭಿವೃದ್ಧಿಗಾಗಿ ನನಗೆ ಮತ ನೀಡಿ ; ಆರಗ ಜ್ಞಾನೇಂದ್ರ

0 0


ಹೊಸನಗರ: ಕಳೆದ ಹತ್ತು ವರ್ಷ ಆಡಳಿತ ನಡೆಸಿದವರು ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡದೇ ಬರೀ ಧರಣಿ ಸತ್ಯಾಗ್ರಹ ಪಾದಯಾತ್ರೆಯಲ್ಲಿ ಕಾಲ ಕಳೆದಿದ್ದವರೂ ಈ ಕ್ಷೇತ್ರಕ್ಕೆ ಅಭಿವೃದ್ಧಿಯಲ್ಲಿ ಶೂನ್ಯ. ಐದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಅಲ್ಪ ಪ್ರಮಾಣದಲ್ಲಿ ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ ತೃಪ್ತಿ ನನಗಿದೆ ಈ ವಿಧಾನಸಭೆಯ ಚುನಾವಣೆಯಲ್ಲಿ ಮತದಾರರು ನನ್ನ ಕೈ ಹಿಡಿದರೇ ಉಳಿದ ಐದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿಕೊಡುತ್ತೇನೆ ನನ್ನ ಹಿಂದಿನ ಐದು ವರ್ಷದ ಅಭಿವೃದ್ಧಿ ನೋಡಿ ಮತ ನೀಡಿ ಎಂದು ಮತದಾರರನ್ನು ಬೇಡಿಕೊಂಡರು.

ತಾಲ್ಲೂಕಿನ ವಾರಂಬಳ್ಳಿಯಲ್ಲಿ ಚುನಾವಣೆ ಪ್ರಚಾರ ನಡೆಸಿ ಮಾತನಾಡಿ, ನನಗೆ ಕೇಂದ್ರದ ನಾಯಕರು ಆರಗ ಜ್ಞಾನೇಂದ್ರ ಅಲ್ಲ ಅಡಿಕೆ ಜ್ಞಾನೇಂದ್ರ ಎಂದು ಕರೆಯುತ್ತಾರೆ‌. ನಾನು ಮಲೆನಾಡಿನ ಭಾಗದ ಜನರ ಉಳಿವಿಗಾಗಿ ಕಾಂಗ್ರೆಸ್ ಪಕ್ಷದ ನಾಯಕರು ಅಡಿಕೆಯಿಂದ ಕ್ಯಾನ್ಸರ್ ರೋಗ ಬರುತ್ತದೆ ಎಂದು ಕೋರ್ಟ್‌ಗೆ ಅಪೀಲ್ ಸಲ್ಲಿಸಿದ್ದು ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಅಡಿಕೆಯಿಂದ ಕ್ಯಾನ್ಸರ್ ರೋಗ ಗುಣ ಮುಖವಾಗುತ್ತದೆ ಎಂದು ಆರೋಗ್ಯ ಇಲಾಖೆಯಿಂದ ವರದಿ ತರಿಸಿಕೊಂಡ ಮೇಲೆ ಅಡಿಕೆ ಧಾರಣೆ ಬೆಲೆ ಏರಿಕೆಗೊಂಡಿದೆ. ಒಂದು ಕ್ವಿಂಟಾಲ್ ಅಡಿಕೆ ಬೆಲೆ 40 ಸಾವಿರದಿಂದ 49ಸಾವಿರಕ್ಕೆ ಏರಿಕೆಗೊಂಡಿದ್ದು ಇದರ ಶ್ರೇಯಸ್ಸು ನನಗೆ ಸಲ್ಲಬೇಕು. ಅದಕ್ಕಾಗಿಯಾದರೂ ಪುನಃ 5 ವರ್ಷಕ್ಕೆ ನನ್ನನ್ನೂ ಗೆಲ್ಲಿಸಿ ಎಂದು ಮತದಾರರನ್ನು ಕೇಳಿಕೊಂಡರು.ಈ ಸಭೆಯಲ್ಲಿ ಮಾಜಿ ಶಾಸಕ ಬಿ ಸ್ವಾಮಿರಾವ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಉಸ್ಮಾನ್ ಸಾಬ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು ಸಚಿವರ ಆಪ್ತ ಕಾರ್ಯದರ್ಶಿ ಬಸವರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!