ಅಭೀಷ್ಟವರ ಪ್ರಧಾಯಿನಿ ಬಂಡಿಯಮ್ಮ ದೇವಿಯ ವೈಭವದ ಪೂಜಾ ಮಹೋತ್ಸವ

0 445

ರಿಪ್ಪನ್‌ಪೇಟೆ: ಬೇಡಿದ ವರವನ್ನು ಕರುಣಿಸುವ ಮಹಾತಾಯಿ ಬಂಡಿಯಮ್ಮ (Bandiyamma) ದೇವಿಯ ವೈಭವದ ಪೂಜಾ ಮಹೋತ್ಸವವು ಸಂಭ್ರಮ ಸಡಗರದೊಂದಿಗೆ ಜಂಬಳ್ಳಿ ಗ್ರಾಮದಲ್ಲಿ ಜರುಗಿತು.

ದೀಪಾವಳಿಯ (Deepavali) ಹಬ್ಬದಲ್ಲಿ ವರ್ಷಕ್ಕೊಮ್ಮೆ ಆಚರಿಸಲಾಗುವ ಜಂಬಳ್ಳಿ ಗ್ರಾಮದಲ್ಲಿನ ಬಂಡಿಯಮ್ಮ ದೇವಿಯ ಪೂಜಾ ಮಹೋತ್ಸವವು ಹುಂಚದ ಶಾಂತಯ್ಯನವರ ಪುರೋಹಿತ್ವದಲ್ಲಿ ಶಾಸ್ತ್ರೋಕ್ತವಾಗಿ ಜರುಗಿತು.

ಸಂತಾನ ಮತ್ತು ಆರೋಗ್ಯ ಭಾಗ್ಯ ಹೀಗೆ ಹತ್ತು ಹಲವು ಬೇಡಿಕೆಯನ್ನು ಹೊತ್ತು ಬರುವ ಭಕ್ತರ ವರವನ್ನು ಕುರುಣಿಸುವ ಮಹಾತಾಯಿ ಬಂಡಿಯಮ್ಮ ದೇವಿಗೆ ಹಣ್ಣು ಕಾಯಿ ಹರಕೆಯನ್ನು ಭಕ್ತಿಯಿಂದ ಸಮರ್ಪಿಸಿದರು.

ಜಂಬಳ್ಳಿಯ ಶಿವಾನಂದಪ್ಪಗೌಡ, ಜೆ.ಎಂ.ಶಾಂತಕುಮಾರ, ನಾಗಭೂಷಣಗೌಡರು, ಜಯಪ್ಪ ಸಂಪಳ್ಳಿ, ಗಿರೀಶ್‌ಗೌಡ, ಶರತ್‌ಗೌಡ, ಲಾಲೂಪ್ರಸಾದ್‌ಗೌಡ, ಜೆ.ಜಿ.ಸದಾನಂದ, ನಾಗವೇಣಮ್ಮ,ಕಮಲಾಕ್ಷ, ಗಾಯಿತ್ರಿ ಮುರುಗೇಂದ್ರಪ್ಪಗೌಡ, ಸುಮಿತ್ರಮ್ಮ, ಸಹನಾ ಶಾಂತಕುಮಾರ, ದ್ರಾಕ್ಷಾಯಿಣಿ ಇನ್ನಿತರರು, ಗ್ರಾಮಸ್ಥರು ಪಾಲ್ಗೊಂಡು ದೇವಿಗೆ ಭಕ್ತಿ ಸಮರ್ಪಿಸಿದರು.

Leave A Reply

Your email address will not be published.

error: Content is protected !!