ಅವೈಜ್ಞಾನಿಕ ಕಾಮಗಾರಿ ; ಸೇತುವೆಗೆ ಸಂಚಕಾರ

0 283

ಹೊಸನಗರ : ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಸೇತುವೆಗೆ ಸಂಚಕಾರ ಬಂದೊದಗಿದೆ. ಹೊಳೆ ನೀರಿನ ರಭಸಕ್ಕೆ ಸೇತುವೆಗೆ ಹಾಕಿರುವ ಮಣ್ಣು ಕೊಚ್ಚಿಹೋಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಮಣ್ಣು ಕೊಚ್ಚಿ ಹೋಗುತ್ತಿದ್ದು, 2023 ರಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ಒಂದೇ ವರ್ಷಕ್ಕೆ ಕಾಮಗಾರಿಯ ಅಸಲಿ ಬಣ್ಣ ಬಯಲಾಗಿದೆ.

ರಾಣೆಬೆನ್ನೂರು – ಬೈಂದೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಸೇತುವೆ ಶಿವಮೊಗ್ಗದಿಂದ ಕೊಲ್ಲೂರು, ಕುಂದಾಪುರ, ಸಿಗಂದೂರು ಭಾಗಗಳಿಗೆ ಸಂಪರ್ಕ ಹೊಂದಿದೆ.

ಸೇತುವೆಯ ಮಣ್ಣು ಸಂಪೂರ್ಣವಾಗಿ ಕೊಚ್ಚಿಹೋದ್ರೆ ಸಂಪರ್ಕ ಕಡಿತದ ಭೀತಿ ಎದುರಾಗಿದ್ದು ಸೈಡ್ ಪಿಚ್ಚಿಂಗ್ ಕಟ್ಟದೆ ಕೇವಲ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿತ್ತು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. https://fb.watch/m2WXSZNQon/?mibextid=MGVWDh&startTimeMs=4290


ಕಳೆದ ಮೂರು ವರ್ಷದಿಂದಲೂ ಹೊಸ ಕಾಮಗಾರಿ ನಡೆಯುತ್ತಲೇ ಇದೆ. ಇದೀಗ ಹೊಸ ಸೇತುವೆ ಕೂಡ ನಿರ್ಮಾಣವಾಗಿದೆ. ಆದರೆ ಸೈಡ್ ವಾಲ್, ಪಿಚ್ಚಿಂಗ್ ಕಟ್ಟದ ಹಿನ್ನೆಲೆಯಲ್ಲಿ ಮಣ್ಣು ಸಲೀಸಾಗಿ ಹೊಳೆ ಸೇರುತ್ತಿದೆ. ಇದೇ ಮಾರ್ಗ ಚಿಕ್ಕಪೇಟೆ ಸೇತುವೆಯ ಪಿಚ್ಚಿಂಗ್ ಕುಸಿತ ಬೆನ್ನಲ್ಲೇ ಮಡೋಡಿ ಸ್ಥಿತಿ ಕೂಡ ಇದೇ ರೀತಿಯಾಗಿದೆ.


ರಾಣೇಬೆನ್ನೂರು- ಬೈಂದೂರು ಹೆದ್ದಾರಿಯಲ್ಲಿ ಬರುವ ನಾಗೋಡಿ ತಡೆಗೋಡೆ, ಮಡೋಡಿ ರಸ್ತೆ, ಚಿಕ್ಕಪೇಟೆ ಸೇತುವೆ ಸೇರಿದಂತೆ ಬಹುತೇಕ ಕಾಮಗಾರಿಗಳು ಒಂದಿಲ್ಲೊಂದು ಅವಾಂತರ ಸೃಷ್ಟಿ ಮಾಡುತ್ತಿದ್ದು ಕಾಮಗಾರಿಯ ಮೇಲೆಯೇ ಅನುಮಾನ ಮೂಡುತ್ತಿದೆ. ಈ ಭಾಗದಲ್ಲಿ ವ್ಯಾಪಕ ಮಳೆಯಿಂದ ಆಗುತ್ತಿರುವ ತೊಂದರೆಯ ಬಗ್ಗೆ ಅರಿವಿದ್ದರೂ ಕಾಮಗಾರಿಯಲ್ಲಿ ಮುಂಜಾಗ್ರತಾ ಕ್ರಮ ಅಳವಡಿಸಿಕೊಳ್ಳದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.

error: Content is protected !!