Ammanaghatta | Jenukallamma | Shivamogga | ಅ.3 ರಿಂದ 13 ರವರೆಗೆ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿ ಜಾತ್ರಾ ಮಹೋತ್ಸವ

0 313

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ಶ್ರೀ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್ 3 ರಿಂದ 13 ರವರೆಗೆ ಹಾಗೂ ಅಕ್ಟೋಬರ್ 15 ರಿಂದ 24 ರವರಗೆ ನವರಾತ್ರಿ ಉತ್ಸವ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ ಎಂದು ದೇವಸ್ಥಾನ ಕಟ್ಟಡ ಸಮಿತಿಯವರು ಹಾಗೂ ವ್ಯವಸ್ಥಾಪನಾ ಸಮಿತಿಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.28 ರಂದು ಹಳೆ ಅಮ್ಮನಘಟ್ಟದಲ್ಲಿ ಪೂಜೆ ನೆರವೇರುವುದು. 29 ರಂದು ದೇವಿಗೆ ಕಂಕಣ ಕಟ್ಟಲಾಗುವುದು. ಅಕ್ಟೋಬರ್ 3 ರಿಂದ ಆರಂಭವಾಗುವ ದೇವಿಯ ಜಾತ್ರಾ ಮಹೋತ್ಸವವು ಎರಡು ಮಂಗಳವಾರ ಹಾಗೂ ಎರಡು ಶುಕ್ರವಾರದಂದು ವಿಶೇಷವಾಗಿ ಆಚರಿಸಲಾಗುತ್ತದೆ ಮತ್ತು ಅಕ್ಟೋಬರ್ 15 ರಿಂದ 24 ರವರೆಗೆ ದಸರಾ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು 09 ದಿನ ನಿರಂತರ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯರು ಅಧ್ಯಕ್ಷ ಬಿ.ಸ್ವಾಮಿರಾವ್ ವಿವರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರು ಹಾಗೂ ಕಟ್ಚಡ ಸಮಿತಿಯ ಸದಸ್ಯರು ಇನ್ನಿತರರು ಇದ್ದರು.

Leave A Reply

Your email address will not be published.

error: Content is protected !!