ಆಮ್‌ಆದ್ಮಿ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ; ಕೆ. ದಿವಾಕರ್

0 0

ಹೊಸನಗರ: ರಾಜ್ಯ ಹಾಗೂ ರಾಷ್ಟ್ರದಲ್ಲಿನ ಜನವಿರೋಧಿ ನೀತಿಯಿಂದ ಮತದಾರರು ಬೇಸತ್ತಿದ್ದಾರೆ. ಆಡಳಿತ ವಿರೋಧಿ ಅಲೆ ಹಾಗೂ ಬದಲಾವಣೆಯ ನಿರೀಕ್ಷೆಯನ್ನು ಹೊಂದಿರುವ ಮತದಾರರು ಆಮ್‌ಆದ್ಮಿ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ಸೂಚಿಸಲಿದ್ದಾರೆ. ಈ ಹಿನ್ನೆಲೆಯಲ್ಲಿರಾಜ್ಯದಲ್ಲಿ 10ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷಗೆಲ್ಲುವ ವಿಶ್ವಾಸವಿದೆ ಎಂದು ಸಾಗರ ಕ್ಷೇತ್ರದ ಅಭ್ಯರ್ಥಿ, ನ್ಯಾಯವಾದಿ ಕೆ.ದಿವಾಕರ್ ಹೇಳಿದರು.

ಅವರು ಇಲ್ಲಿನ ಅತ್ತಿಕೊಡಿಗೆ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ವಿಧಾನಸಭಾ ಕ್ಷೇತ್ರದಲ್ಲಿ ತಾವು ಗೆಲುವು ಸಾಧಿಸುವ ಅಚಲ ವಿಶ್ವಾಸವಿದೆ ಪ್ರಸ್ತುತ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಬಿಜೆಪಿ ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ನಾನು 3 ದಶಕಗಳ ಕಾಲ ಸಾರ್ವಜನಿಕರ ಒಡನಾಟ ಹೊಂದಿದ್ದೇನೆ. ರಾಜಕೀಯ ವ್ಯವಸ್ಥೆಯನ್ನು ಚನ್ನಾಗಿ ಅರಿತಿದ್ದೇನೆ. ಸಾಗರ ಹಾಗೂ ಹೊಸನಗರ ಭಾಗದಲ್ಲಿ ಕೆಲವು ದಶಕಗಳಿಂದಲೂ ಮತದಾರರು ಬದಲಾವಣೆ ಬಯಸುತ್ತಿದ್ದಾರೆ. ಅದು ಈ ಬಾರಿ ಈಡೇರಲಿದೆ. ಕ್ಷೇತ್ರದ ಮತದಾರರು ಈ ಬಾರಿ ತಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಅವರು ಹೇಳಿದರು.


ಸಾಗರ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮದೇ ಆದ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಿದ್ದೇನೆ. ಸಾಗರವನ್ನು ಪ್ರತ್ಯೇಕ ಜಿಲ್ಲೆಯ ಸ್ಥಾನ ನೀಡುವುದು, ಇಂಜಿನಿಯರಿಂಗ್‌ ಕಾಲೇಜು ಸ್ಥಾಪನೆ, ಶರಾವತಿ ಸೇರಿದಂತೆ ಮುಳುಗಡೆ ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು, ಮಂಗನಕಾಯಿಲೆಗೆ ಔಷಧ ಕಂಡುಹಿಡಿಯುವ ಸಂಶೋಧನೆಗೆ ಹೆಚ್ಚಿನ ಆಧ್ಯತೆ ನೀಡುವುದು, ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ನಿಷೇಧದ ಕುರಿತು ನಡೆಯುತ್ತಿರುವ ಚಟುವಟಿಕೆಗಳಿಗೆ ಸಂಬಂಸಿದಂತೆ ಬೆಳೆಗಾರರ ಹಿತಕಾಯಲು ಸುಪ್ರೀಂಕೋರ್ಟ್‌ನಲ್ಲಿ ತಾರ್ಕಿಕ ಹೋರಾಟ ನಡೆಸುವುದು, ಸಾಗರ ಹೊಸನಗರ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರವಾಸಿ ಸರ್ಕ್ಯೂಟ್‌ ರಚನೆ ಮಾಡುವುದು ಸೇರಿದಂತೆ ವಿವಿಧ ಹಲವು ಯೋಜನೆಗಳನ್ನು ರೂಪಿಸುವ ಕನಸು ಹೊಂದಲಾಗಿದೆ. ಜನಪರ ಆಡಳಿತ ಹಾಗೂ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಹಾಡುವ ಉದ್ದೇಶದಿಂದ ಮತದಾರರುತಮ್ಮನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.


ಗೋಷ್ಠಿಯಲ್ಲಿ ಪ್ರಮುಖರಾದ ಸತೀಶ್‌ಗೌಡ ಹಾಗೂ ಸೋಗೋಡು ಗಣೇಶ ಮತ್ತಿತರರುಇದ್ದರು.

Leave A Reply

Your email address will not be published.

error: Content is protected !!