ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ‌ ; ಬೈಕ್’ಗಳು, ನಗದು ವಶಕ್ಕೆ ; ಪ್ರಕರಣ ದಾಖಲು

0 8

ಹೊಸನಗರ : ಇಸ್ಪೀಟ್ ಜೂಜಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಎರಡು ಬೈಕ್ ಗಳು ಮತ್ತು ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ತಾಲೂಕಿನ ಅಲಗೇರಿಮಂಡ್ರಿ ಗ್ರಾಮದ ಮುಡುಬದ ಶಿವಪ್ಪ ಎಂಬಾತನ ಮನೆ ಹಿಂಭಾಗ ಐದಾರು ಜನರ ಗುಂಪು ಇಸ್ಪೀಟ್ ಜೂಜಾಟ ನಡೆಸಿದ್ದರು. ಇದನ್ನು ಪತ್ತೆ ಹಚ್ಚಿದ ಪೊಲೀಸರು ಹರತಾಳು ಗ್ರಾಮದ ಕೆ.ರಾಜು, ಅಲಗೇರಿಮಂಡ್ರಿಯ ಮನ್ಸೂರ್, ಮುಡುಬ ಗ್ರಾಮದ ಸತೀಶ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದು ಹಾಗೂ ಘಟನಾ ಸ್ಥಳದಲ್ಲಿ ಜೂಟಾಟಕ್ಕೆ ಬಳಸಿದ್ದ ವಸ್ತುಗಳು ಹಾಗೂ 6,030 ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಸೊನಲೆ ಗ್ರಾಮದ ಸರಕಾರಿ ಶಾಲೆ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಕೆಲವರು ಇಸ್ಪೀಟ್ ಜೂಜಾಟದಲ್ಲಿ ನಿರತರಾಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳಾದ ನಿವಣೆ ಸುರೇಶ, ಅರಳಸುರಳಿ ಗ್ರಾಮದ ಚಂದ್ರಶೇಖರ, ಶ್ರೀನಿವಾಸ, ಸತೀಶ, ಸೀತಾರಾಮ, ಸೊನಲೆ ನಿವಾಸಿ ರಾಜೇಶ ಎಂಬ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ವೇಳೆ 11,700 ರೂ. ನಗದು, ಎರಡು ದ್ವಿಚಕ್ರ ವಾಹನ, ಇಸ್ಪೀಟ್ ಕಾರ್ಡ್‌ಗಳನ್ನು ಸ್ಥಳದಿಂದ ಜಪ್ತಿ ಮಾಡಿದ್ದಾರೆ.

ಈ ದಾಳಿಯಲ್ಲಿ ರಕ್ಷಣಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಡಿವೈಎಸ್‌ಪಿಯವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಆದೇಶದ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ಶಿವಾನಂದರವರ ನೇತೃತ್ವದ ತಂಡ ಭಾಗವಹಿಸಿತ್ತು.

Leave A Reply

Your email address will not be published.

error: Content is protected !!