ಕಿಮ್ಮನೆ ಸಜ್ಜನ ವ್ಯಕ್ತಿತ್ವಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ; ಚಂದ್ರಮೌಳಿಗೌಡ

0 0


ಹೊಸನಗರ: ಮಾಜಿ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿಯು ಯಾವುದೇ ದಬ್ಬಾಳಿಕೆ ನಡೆಸದೇ ಸೋತ ಸಂದರ್ಭದಲ್ಲಿಯೂ ಜನರೊಂದಿಗೆ ಬೆರೆಯುವ ಜೊತೆಗೆ ಸುಖ-ಕಷ್ಟಗಳಲ್ಲಿ ಭಾಗಿಯಾಗಿರುವ ವ್ಯಕ್ತಿ ಕಿಮ್ಮನೆ ರತ್ನಾಕರ್‌ರವರಾಗಿದ್ದು ಇವರ ಸಜ್ಜನ ವ್ಯಕ್ತಿತ್ವಕ್ಕೆ ಬಿಜೆಪಿ ಬಿಟ್ಟು ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಗುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಚಂದ್ರಮೌಳಿ ಗೌಡ ಹೇಳಿದರು.

ತಾಲ್ಲೂಕಿನ ಸೊನಲೆ ಗ್ರಾಮದ ಪಂಚಾಯಿತಿಯ ಬಿಜೆಪಿ ಪ್ರಮುಖರಾದ ಸೊನಲೆ ನಟರಾಜ ಗೌಡ, ಕೊಳಗಿ ಪ್ರಸನ್ನ ಗೌಡ, ಕರುಣಾಕರ ಗೌಡ, ಸದಾನಂದ ಗೌಡ, ಮಂಜುನಾಥ ಗೌಡ ಇನ್ನೂ ಮುಂತಾದವರು ಬಿಜೆಪಿ ಪಕ್ಷ ಬಿಟ್ಟು ತಾಲ್ಲೂಕು ಪಂಚಾಯತಿಯ ಮಾಜಿ ಸದಸ್ಯ ಚಂದ್ರಮೌಳಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತನಾಡಿದರು.


ಕ್ಷೇತ್ರದ ಜನರು ಸುಖವಾಗಿದ್ದರೆ ನಾನು ಸುಖೀ: ಕಿಮ್ಮನೆ


ಕ್ಷೇತ್ರದ ಜನರು ಸುಖವಾಗಿದ್ದರೇ ನಾನು ಸುಖಿ ಎಂದು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಮತನಾಡಿದರು. ನಾನು ರಾಜಕೀಯ ಮಾಡುತ್ತ ಸುಮಾರು ಮೂವತ್ತು ವರ್ಷ ಕಳೆದಿದೆ ಏಳು-ಬೀಳು ಕಂಡಿದ್ದೇನೆ. ಗೆದ್ದಾಗ ದಬ್ಬಾಳಿಕೆ ಮಾಡದೆ ಸೋತಾಗ ಎಂದು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ ಕ್ಷೇತ್ರದ ಜನರ ಸುಖ-ದುಃಖಗಳಿಗೆ ಹೋರಾಟಗಳಿಗೆ ಭಾಗವಹಿಸಿದ್ದೇನೆ‌. ನಾನು ಮಾಡಿದ ಅಭಿವೃದ್ಧಿ ಕೆಲಸ ಹಾಗೂ ನನ್ನ ಸರಳ ನಡುವಳಿಕೆಯ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ ಎಂದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಂಜುನಾಥ್ ಗೌಡ ಮಾತನಾಡಿ, ಎಲ್ಲ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕದೆ ಈ ಪ್ರತಿಕ್ರಿಯೆಯನ್ನು ಮತವಾಗಿ ಪರಿವರ್ಥನೆಯಗಬೇಕಾಗಿದ್ದು ಈ ಬಾರೀಯ ಚುನಾವಣೆಯಲ್ಲಿ ತೀರ್ಥಹಳ್ಳಿ – ಹೊಸನಗರ ಕ್ಷೇತ್ರದ ಜನರು ಕಿಮ್ಮನೆ ರತ್ನಾಕರ್‌ರವರ ಕೈ ಬಲಪಡಿಸುತ್ತರೆ ಎಂಬ ನಂಬಿಕೆಯಿಂದ ಹೋರಾಟ ನಡೆಸುತಿದ್ದೇವೆ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡಬೇಕಾಗಿದೆ ಎಂದರು.

ಸೊನಲೆ ಗ್ರಾಮದಲ್ಲಿ ಬಿಜೆಪಿ ಭದ್ರಕೊಟೆಯಾಗಿದ್ದು ಇಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್‌ರವರ ಹಿಡಿತದಲ್ಲಿದ್ದೂ ಆದರೆ ಈ ಗ್ರಾಮದಲ್ಲಿ ಒಂದೊಂದೆ ವಿಕೆಟ್‌ಗಳು ಕಾಂಗ್ರೆಸ್ ಪಾಲಾಗುತ್ತಿದೆ. ಇದರಿಂದ ಬಿಜೆಪಿ ಭದ್ರಕೋಟೆ ಸೊನಲೆ ಗ್ರಾಮ ಮುಂದಿನ ದಿನದಲ್ಲಿ ಕಾಂಗ್ರೆಸ್ ಮೇಲುಗೈಯಾಗಬಹುದು ಎಂದು ಹೇಳಲಾಗುತ್ತಿದೆ. ಇದರಿಂದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಿಗೆ ಮುಜುಗರವಾಗುವುದರಲ್ಲಿ ಯಾವುದೇ ಅನುಮನವಿಲ್ಲ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.


ಈ ಸೇರ್ಪಡೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹೇಶ ಗೌಡ, ನಾಗೇಶ್ ಗೌಡ, ಎಸ್.ಆರ್.ಪಿ ಸುರೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!