ಕುವೆಂಪು ವಿವಿ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ತೃತೀಯ ರ‍್ಯಾಂಕ್ ಪಡೆದ ಕು|| ಅನುಷಾ ಎ.ಜಿ.

0 2


ಹೊಸನಗರ: ಇಲ್ಲಿನ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಕು|| ಅನುಷಾ ಎ.ಜಿ.ಯವರು ಎರಡನೇ ರ‍್ಯಾಂಕ್ ಪಡೆದು ಕೊಡಚಾದ್ರಿ ಕಾಲೇಜಿಗೆ ಈ ಹಿಂದೆ ಕೀರ್ತಿ ತಂದಿದ್ದರು. 2022-23ನೇ ಸಾಲಿನಲ್ಲಿ ಕುವೆಂಪು ವಿಶ್ವ ವಿದ್ಯಾಲಯದವರು ನಡೆಸಿದ ಕನ್ನಡ ಸ್ನಾತಕೋತ್ತರ ಪರೀಕ್ಷೆಯಲ್ಲಿ ತೃತೀಯ ರ‍್ಯಾಂಕ್ ಪಡೆದು ಹೊಸನಗರ ತಾಲ್ಲೂಕು ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.


ಇವರು ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಗ್ರಾಮದ ಗುಡ್ಡಪ್ಪ ಮತ್ತು ಲಲಿತಾ ದಂಪತಿಗಳ ಪುತ್ರಿಯಾಗಿದ್ದು ಇವರ ಸಹೋದರ ಅಭಿಷೇಕ್ ನೊಣಬೂರಿನ ಸಹಕಾರಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ಹಾಗೂ ಹೊಸನಗರ ತಾಲ್ಲೂಕಿಗೆ ಓದಿನಲ್ಲಿ ಕೀರ್ತಿ ತಂದಿರುವ ಇವರನ್ನು ಹೊಸನಗರದ ಜನತೆ ಹಾಗೂ ಹೊಸನಗರ ಕೊಡಚಾದ್ರಿ ಕಾಲೇಜಿನ ಆಡಳಿತ ಮತ್ತು ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!