ಕೆಂಪೇಗೌಡರಿಂದ ಎಲ್ಲಾ ವರ್ಗಕ್ಕೂ ಸಮಾನ ಅವಕಾಶ ; ಶಾಸಕ ಗೋಪಾಲಕೃಷ್ಣ ಬೇಳೂರು

0 0


ಹೊಸನಗರ : ನಾಡಪ್ರಭು ಕೆಂಪೇಗೌಡರಂತಹ ಮಹಾನೀಯರ ಬದುಕು ಇಂದಿನ ಯುವಸಮೂಹಕ್ಕೆ ಆದರ್ಶವಾಗಬೇಕು ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.


ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಅವರ 514ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪಷ್ಟ ನಿಲುವು, ದೂರ ದೃಷ್ಟಿತ್ವ ಹೊಂದಿದ್ದ ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣದ ಮೂಲ ಪುರುಷ. ತಮ್ಮ ಪಕ್ವ ಆಡಳಿತದ ಮೂಲಕ ಜ್ಯಾತ್ಯಾತೀತರಾಗಿ ಎಲ್ಲಾ ವರ್ಗಕ್ಕೂ ನ್ಯಾಯೋಚಿತ ಸ್ಥಾನಮಾನ ಕಲ್ಪಿಸಿದ ಮಹಾಪುರುಷ ಈ ನಾಡಪ್ರಭು ಕೆಂಪೇಗೌಡ ಎಂದರು.

ತಹಶೀಲ್ದಾರ್ ಡಿ.ಜಿ.ಕೋರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಿಟಾಚಿ ಶ್ರೀಧರ್, ಪ.ಪಂ. ಅಧ್ಯಕ್ಷೆ ಗುಲಾಬಿ. ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯ ಹಾಲಗದ್ದೆ ಉಮೇಶ್, ಇಓ ನರೇಂದ್ರ, ಬಿಇಒ ಕೃಷ್ಣಮೂರ್ತಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಶ್ರೀಧರ ಉಡುಪ. ಶ್ರೀನಿವಾಸ ಕಾಮತ್, ಎಸ್.ಎನ್. ರಾಜಮೂರ್ತಿ, ಸೇರಿದಂತೆ ಒಕ್ಕಲಿಗರ ಸಂಘದ ಪ್ರಮುಖರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಪ್ರಿಯಾಂಕ ಪೂರ್ಣೇಶ್, ಗ್ರಾಪಂ ಸದಸ್ಯ ಕೃಷ್ಣಮೂರ್ತಿ, ಟೆಂಕಬೈಲು ರಾಜೇಶ್, ವಿಠಲ್ ರಾವ್, ಕಾಯಿ ನಾಗೇಶ್ ಮೊದಲಾದವರು ಇದ್ದರು.
ಇದೇ ವೇಳೆ ಒಕ್ಕಲಿಗರ ಸಂಘದ ವಿವಿಧ ಚುಟುವಟಿಕೆಗಳಿಗೆ ಅಗತ್ಯವಾದ 3 ಎಕರೆ ಭೂಮಿ ನೀಡುವಂತೆ ಶಾಸಕರಿಗೆ ಸಂಘ ಮನವಿ ಸಲ್ಲಿಸಿತು.


ಶಿಕ್ಷಕ ಪ್ರವೀಣ್ ನಿರೂಪಿಸಿ, ಪ್ರಣೇಶ್ ಸ್ವಾಗತಿಸಿ, ಚುಂಚಾದ್ರಿ ಮಹಿಳಾ ಸಂಘದ ಸದಸ್ಯರು ಪ್ರಾರ್ಥಿಸಿದರು.

Leave A Reply

Your email address will not be published.

error: Content is protected !!