ಕೋಡೂರು : ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ !

0 0

ಹೊಸನಗರ : ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾಲು ಸಮೇತವಾಗಿ ಬಂಧಿಸಲಾಗಿದೆ.

ರಾಜ್ಯ ವಿಧಾನ ಸಭಾ ಚುನಾವಣೆ-2023 ರ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಇಂದು ಅಬಕಾರಿ ಆಯುಕ್ತರು ಮತ್ತು ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ರವರ ಆದೇಶ ಹಾಗೂ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆರವರ ನಿರ್ದೇಶನದಂತೆ ಶಿವಪ್ರಸಾದ್ ಅಬಕಾರಿ ಉಪ ಅಧೀಕ್ಷಕರರು ತೀರ್ಥಹಳ್ಳಿ ಉಪ ವಿಭಾಗ ರವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರು,ಅಬಕಾರಿ ಉಪ ನಿರೀಕ್ಷಕರು ಹೊಸನಗರ ವಲಯ ಇವರು ಸಿಬ್ಬಂದಿಯೊಂದಿಗೆ ತಾಲ್ಲೂಕಿನ ಕೋಡೂರು ಗ್ರಾಮದ ವಾಸಿಯಾದ ಪ್ರದೀಪ ಬಿನ್ ಸುಬ್ಬಪ್ಪ ಈತನು ಅಕ್ರಮವಾಗಿ 9 ಲೀಟರ್ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ದಾಳಿಯಲ್ಲಿ ಶಿವಪ್ರಸಾದ್ ಅಬಕಾರಿ ಉಪ ಅಧಿಕ್ಷಕರು, ತೀರ್ಥಹಳ್ಳಿ ಉಪ ವಿಭಾಗ, ನಾಗರಾಜ ಅಬಕಾರಿ ನಿರೀಕ್ಷಕರು, ವಾಸವಿ. ಟಿ. ಎನ್ ಅಬಕಾರಿ ಉಪ ನಿರೀಕ್ಷಕರು ಸಿಬ್ಬಂದಿಗಳಾದ ಪ್ರಕಾಶ್ ಕೆ, ರಾಘವೇಂದ್ರ ಟಿ, ಪಾಂಡು ಅಂಬವ್ವಗೊಳ್ ಹಾಗೂ ವಾಹನ ಚಾಲಕರಾದ ಬಸವರಾಜ್ ಮತ್ತು ಪ್ರಸನ್ನ ರವರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!